ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ದ ವತಿಯಿಂದ ವಿವೇಕಾನಂದರ 158 ನೇ ಜನ್ಮ ದಿನಾಚರಣೆಯನ್ನು “ವಿವೇಕ ಸಂದೇಶ ” ಕಾರ್ಯಕ್ರಮವನ್ನಾಗಿ ಬಿ.ಸಿ ರೋಡಿನ ಸಂಘ ಕಾರ್ಯಾಲಯದಲ್ಲಿ ಆಚರಿಸಲಾಯಿತು.



ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಬಂಟ್ವಾಳ ದ ನಗರ ಅಧ್ಯಕ್ಷರಾದ ಡಾ| ರಮಾನಂದ ಭಟ್ ಕಾರ್ಯಕ್ರಮವನ್ನು ಉದ್ದೇಶಿಸಿ ವಿವೇಕಾನಂದರ ತತ್ವ ಚಿಂತನೆಗಳಿಂದ ಪ್ರಭಾವಿತಗೊಂಡು ರಚನೆಯಾದ ವಿದ್ಯಾರ್ಥಿ ಪರಿಷತ್ ವಿವೇಕಾನಂದರ ಪರಿಕಲ್ಪನೆಯ ವಿಶ್ವಗುರು ಭಾರತಕ್ಕಾಗಿ ಶ್ರಮಿಸುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ವಿವೇಕಾನಂದರು ಕೇವಲ ಅಲ್ಪ ಕಾಲ ಬದುಕಿದ್ದರೂ ಆ ಸಮಯದಲ್ಲಿ ಮಾಡಿದ ಸಾಧನೆಯಿಂದಾಗಿ ಅವರನ್ನು ಇಂದು ವಿಶ್ವವೇ ಹಾಡಿ ಕೊಂಡಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಂಗಳೂರು ಜಿಲ್ಲಾ ಸಂಚಾಲಕರಾದ ಹರ್ಷಿತ್ ಕೊಯಿಲ, ಬಂಟ್ವಾಳ ತಾಲೂಕು ಸಂಚಾಲಕರಾದ ದಿನೇಶ್ ಕೊಯಿಲ, ನಗರ ಕಾರ್ಯದರ್ಶಿಗಳಾದ ನಾಗರಾಜ್ ಶೆಣೈ ,ಗುರುಪ್ರಸಾದ್ ಸಿದ್ದಕಟ್ಟೆ,ತಾಲೂಕು ಸಂಚಾಲಕರಾದ ಅಖಿಲಾಷ್ ,ನಗರವಿದ್ಯಾರ್ಥಿನಿ ಪ್ರಮುಖ್ ವಂದನಾ ,ಸಹವಿದ್ಯಾರ್ಥಿನಿ ಪ್ರಮುಖ್ ರೇಶ್ಮಾ ,ಕಾರ್ಯಕರ್ತರಾದ ದೀಪಕ್ ,ಕಿರಣ್ ,ಆಕಾಶ್, ಶ್ರೀಧನ್ ,ಸನತ್ , ಶಿವುಕುಮಾರ್ , ಮುಂತಾದವರು ಉಪಸ್ಥಿತರಿದ್ದರು
ಅ.ಭಾ.ವಿ.ಪ ಬಂಟ್ವಾಳ ತಾಲೂಕು ಸಂಚಾಲಕರಾದ ದಿನೇಶ್ ಕೊಯಿಲ ಸ್ವಾಗತಿಸಿದರು.ನಗರ ಸಹ ಕಾರ್ಯದರ್ಶಿ ಅನೀಶ್ ಚೇಲೂರು ವಂದಿಸಿದರು.ಸಿದ್ದಕಟ್ಟೆ ನಗರ ಕಾರ್ಯದರ್ಶಿಯಾದ ಗುರುಪ್ರಸಾದ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.