ಬಂಟ್ವಾಳ: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದ ಲ್ಲಿ ವೈರಲ್ ಆಗಿದೆ.



ಘಟನೆಯ ಲ್ಲಿ ಬೈಕ್ ಸವಾರ ಪಣೋಲಿಬೈಲು ನಿವಾಸಿ ದಯಾನಂದ ಎಂಬಾತನಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ತಾಲೂಕಿನ ಪಣೋಲಿಬೈಲು ಸಮೀಪದ ಕಾರಾಜೆ ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಡಿಕ್ಕಿ ಯಾದ ವಿಡಿಯೋ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ.
ಅಪಘಾತ ಸಂಭವಿಸುವ ಸ್ಥಳವಲ್ಲವಾದರೂ ವಿಚಿತ್ರ ರೀತಿಯಲ್ಲಿ ಮುಖಾಮುಖಿಯಾಗಿ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ದಯಾನಂದ ಬೈಕಿನಿಂದ ಹಾರಿ ಕೆಲಗೆ ಬೀಳುವ ದೃಶ್ಯ ಸೆರೆಯಾಗಿದೆ.