ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರನ್ನು ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಕರ್ಮ ಯೋಗಿ ಶ್ರೀಶ್ರೀಶ್ರೀ ಮೋಹನದಾಸ ಸ್ವಾಮೀಜಿ ಅವರು ಶಾಸಕರ ಕಚೇರಿಯಲ್ಲಿ ಭೇಟಿ ಮಾಡಿದರು.



ಶಾಸಕರ ಜೊತೆ ಕೆಲಹೊತ್ತು ಸಮಾಜದ ಹಾಗುಹೋಗುಗಳ ಬಗ್ಗೆ ಚರ್ಚೆ ನಡೆಸಿದರು.
ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ಬೆಳೆಸುವ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಪೂರಕವಾಗಿ ಹೊಸ ಕಾರ್ಯಕ್ರಮ ಗಳನ್ನು ರೂಪಿಸುವಂತೆ ಮಾನವಿ ಮಾಡಿದರು.
ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಕಲಾವಿದ ಮಾಣಿಲ ಕ್ಷೇತ್ರದ ಟ್ರಸ್ಟಿಗಳಾದ ಮಂಜುವಿಟ್ಲ, ತಾರನಾಥ ಕೊಟ್ಟಾರಿ, ಪ್ರಮುಖರಾದ ರಮಾನಾಥ ರಾಯಿ, ಸುದರ್ಶನ ಬಜ, ಯಶೋಧರ ಕರ್ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.