ಬಂಟ್ವಾಳ : ಪ್ರಸಕ್ತ ಕಾಲದಲ್ಲಿ ಜಾತ್ಯತೀತ ಮೌಲ್ಯದ ಜೊತೆ ಗಟ್ಟಿಯಾಗಿ ನಿಂತಾಗ ಹತ್ತಾರು ಟೀಕೆ, ವಿರೋಧಗಳು ನಮ್ಮನ್ನು ಸುತ್ತುವರಿಯುತ್ತದೆ. ಆದರೂ ನಮ್ಮ ವೈಯಕ್ತಿಕ ಲಾಭ ನಷ್ಟಕ್ಕಿಂತ ನಾವು ನಂಬಿದ ಜಾತ್ಯತೀತ ತತ್ವ, ಸಿದ್ಧಾಂತದಲ್ಲಿ ಗಟ್ಟಿ ನಿಲುವು ತಾಳುವುದು ನಮ್ಮ ಇಂದಿನ ಅವಶ್ಯಕತೆಯಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಭಿಪ್ರಾಯ ವ್ಯಕ್ತಪಡಿಸಿದರು.
ಬಂಟ್ವಾಳದ ಮಿತ್ತಬೈಲ್ ನಲ್ಲಿ ಸೋಮವಾರ ನಡೆದ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಹಮ್ಮಿಕೊಂಡಿರುವ ಅಸ್ತಿತ್ವ ಮತ್ತು ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ ಅಭಿಯಾನದ ಮುನ್ನಡೆ ಯಾತ್ರೆಯ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದ ಮಣ್ಣಿನಲ್ಲಿಯೇ ಜಾತ್ಯತೀತತೆಯ ಸತ್ವ ಇದೆ. ಆದರೆ ಇದನ್ನು ಮೂಲಭೂತವಾದಿಗಳು ಒಡೆದು ಹಾಕುತ್ತಿದ್ದಾರೆ. ಮೂಲಭೂತವಾದವು ಈ ದೇಶಕ್ಕೆ ಅಪಾಯಕಾರಿ ಆಗಿದೆ. ಅದು ಈ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಹಾಗಾಗಿ ಎಲ್ಲಾ ಧರ್ಮದವರು ಸೇರಿ ತಮ್ಮ ತಮ್ಮ ಧರ್ಮಕ್ಕೆ ಅಂಟಿರುವ ಮೂಲಭೂತವಾದವನ್ನು ವಿರೋಧಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ನಾವು ಮನುಷ್ಯ ದ್ವೇಷಿಯಾಗಿ ಬದುಕಬಾರದು. ದ್ವೇಷವನ್ನು ಸೋಲಿಸುವ ಪ್ರೀತಿಯನ್ನು ಗೆಲ್ಲಿಸುವ ಕೆಲಸ ಆಗಬೇಕು. ಯಾರೂ ಕೂಡಾ ಯಾವುದೇ ಪ್ರಚೋದನೆಗೆ ಒಳಗಾಗದೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಿದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಬೊಳ್ಳೂರು ಉಸ್ತಾದ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸೈಯದ್ ಹುಸೇನ್ ಬಾಅಲವಿ ತಂಙಳ್ ದುಅ ನೆರವೇರಿಸಿದರು. ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಉದ್ಘಾಟಿಸಿದರು. ಸೈಯದ್ ಹಮೀದ್ ಅಲಿ ಶಿಹಾಬ್ ತಂಙಳ್ ಪಾಲಕ್ಕಾಡ್ ಯಾತ್ರ ನಾಯಕರ ಸಂದೇಶ ನೀಡಿದರು. ಮುಹಮ್ಮದ್ ಸಾಗರ್ ಪರ್ಲಿಯಾ ಅಧ್ಯಕ್ಷತೆ ವಹಿಸಿದ್ದರು. ಇರ್ಷಾದ್ ದಾರಿಮಿ ಅಲ್ ಜಝಿರಿ ಮಿತ್ತಬೈಲ್ ಅಧ್ಯಕ್ಷತೆ ಭಾಷಣ ಮಾಡಿದರು. ಅಶ್ರಫ್ ಫೈಝಿ ಮಿತ್ತಬೈಲ್ ಪ್ರಸ್ತಾವಿತ ಭಾಷಣ ಮಾಡಿದರು. ಯು.ಕೆ.ಅಝೀಝ್ ದಾರಿಮಿ ಚೋಕ್ಕಬೆಟ್ಟು ದಿಕ್ಸೂಚಿ ಭಾಷಣ ಮಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ರಿಯಾಝ್ ರಹ್ಮಾನಿ ಕಿನ್ಯ ಭಾಗವಹಿಸಿದರು. ಪ್ರಮುಖರಾದ ಸೈಯದ್ ಫಕ್ರುದ್ದೀನ್ ದಾರಿಮಿ ತಂಙಳ್ ತಾನೂರ್, ಸೈಯದ್ ಅಮೀರ್ ತಂಙಳ್, ಅನೀಸ್ ಕೌಸರಿ, ಇಸ್ಮಾಯೀಲ್ ಯಮಾನಿ, ಖಾಸಿಂ ದಾರಿಮಿ, ಕುಕ್ಕಿಲ ದಾರಿಮಿ ವಳಚ್ಚಿಲ್, ಅಬ್ಬಾಸ್ ದಾರಿಮಿ ಫರಂಗಿಪೇಟೆ, ಹನೀಫ್ ಮುಸ್ಲಿಯಾರ್, ಉಬೈದುಲ್ಲಾ ಹಾಜಿ, ಅಶ್ರಫ್ ಮರೋಡಿ ಮೂಡಬಿದ್ರೆ, ಅಬ್ದುಲ್ ಸಲಾಂ ಕೈಕಂಬ, ಸಿದ್ದೀಕ್ ಅಬ್ದುಲ್ ಖಾದರ್, ಅಬೂಸ್ವಾಲಿ ಫೈಝಿ, ಅಝೀಝ್ ಮಲಿಕ್, ಸೈಯದ್ ಇಸ್ಮಾಯೀಲ್ ತಂಙಳ್, ಆರೀಫ್ ಬಡಕಬೈಲ್, ಹನೀಫ್ ದೂಮಳಿಕೆ, ಹಕೀಂ ಬಂಗೇರಕಟ್ಟೆ, ರಿಯಾಝ್ ಫೈಝಿ ಕಕ್ಕಿಂಜೆ, ಫಾರೂಕ್ ಮೂಡಬಿದರೆ, ಬಶೀರ್ ಮಜಲ್, ಮುಸ್ತಫ ಕಟ್ಟದಪಡ್ಪು, ಆಸಿಫ್ ಕಬಕ, ಹಾರೂನ್ ರಶೀದ್ ಬಂಟ್ವಾಳ, ಎ.ಆರ್.ಮುಹಮ್ಮದ್ ಅಲಿ, ಶಾಕಿರ್ ಮಿತ್ತಬೈಲ್, ಸವಾಝ್ ಬಂಟ್ವಾಳ, ಬಂಟ್ವಾಳ ಪುರಸಭಾ ಅಧ್ಯಕ್ಷ ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು.
ಜಮಾಲುದ್ದೀನ್ ದಾರಿಮಿ ಕೈಕಂಬ ಸ್ವಾಗತಿಸಿದರು. ನಝೀರ್ ಅಝ್ ಹರಿ ಬೊಳ್ಮಿನಾರ್ ಧನ್ಯವಾದಗೈದರು. ಖಲಂದರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.