ಬಂಟ್ವಾಳ: ಚುನಾವಣಾ ಪ್ರಯುಕ್ತ ಕಾಪು ತಾಲೂಕಿಗೆ ವರ್ಗಾವಣೆ ಗೊಂಡಿದ್ದ ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್ ಮರಳಿ ಬಂಟ್ವಾಳಕ್ಕೆ ಆಗಮಿಸಿದ್ದು ಇಂದು ಕರ್ತವ್ಯಕ್ಕೆ ಹಾಜರಾದರು.
ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಆಯೋಗ ದ ಆದೇಶದಂತೆ ಕಾಪು ತಾಲೂಕಿಗೆ ವರ್ಗಾವಣೆ ಗೊಂಡಿದ್ದ ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್. ಆರ್.ಅವರು ಚುನಾವಣಾ ಕರ್ತವ್ಯ ಮುಗಿದ ಹಿನ್ನಲೆಯಲ್ಲಿ ವಾಪಾಸು ಬಂಟ್ವಾಳ ತಹಶೀಲ್ದಾರ್ ಅಗಿ ಗುರುವಾರ ಚಾರ್ಜ್ ಪಡೆದುಕೊಂಡರು.
**ಕಾಪುವಿನಲ್ಲಿಯೂ ಯಶಸ್ವಿಯಾದ ತಹಶೀಲ್ದಾರ್ ರಶ್ಮಿ. ಎಸ್.ಆರ್*
ಹೊಸದಾಗಿ ಘೋಷಣೆಯಾದ ಕಾಪು ತಾಲೂಕಿನಲ್ಲಿ ಈ ಬಾರಿ ಪ್ರಥಮವಾಗಿ ಗ್ರಾ.ಪಂ.ಚುನಾವಣೆ ಯ ಮತ ಎಣಿಕೆ ಕಾರ್ಯ ನಿರ್ವಹಿಸಿದ್ದು, ಕಾಪು ಉಳಿಯಾರಗೊಳಿಯ ದಂಡತೀರ್ಥ ಪದವಿ ಕಾಲೇಜಿನಲ್ಲಿ ನಡೆಸಲಾಗಿತ್ತು.
ಆದರೆ ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಲೋಪದೋಷಗಳಾಗದಂತೆ ತಹಶಿಲ್ದಾರ್ ಮತ್ತು ತಂಡ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಅದರ ಕೀರ್ತಿ ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ .ಆರ್.ಅವರಿಗೆ ಸಲ್ಲುತ್ತದೆ.
ಬಂಟ್ವಾಳ ಹಾಗೂ ಕಾಪುವಿನಲ್ಲಿ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿ ಗಳ ಮೆಚ್ಚುಗೆ ಗೆ ಪಾತ್ರರಾಗಿದ್ದರು.