Saturday, October 21, 2023

ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿ ದಿನೇಶ್ ಅಮ್ಟೂರು ಆಯ್ಕೆ

Must read

ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ರಾಜ್ಯ ಎಸ್.ಸಿ.ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಅಯ್ಕೆ ಆಗಿದ್ದಾರೆ.

ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಹಾಗೂ ಜಿಲ್ಲಾಧ್ಯಕ್ಷ ಸುದರ್ಶನ್ ಅವರ ಪ್ರಸ್ತಾವನೆಯಂತೆ ,

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಸೂಚನೆಯಂತೆ , ರಾಜ್ಯ ಎಸ್.ಸಿ.ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ನೇಮಕ ಮಾಡಿ ಅದೇಶ ಮಾಡಿದ್ದಾರೆ.

ಯುವ ರಾಜಕಾರಣಿ ಅಮ್ಟೂರು ಅವರು ಬೂತ್ ಸಮಿತಿ ಕಾರ್ಯದರ್ಶಿ, ಅಮ್ಟೂರು ಗ್ರಾ.ಸಮಿತಿ ಕಾರ್ಯದರ್ಶಿ ಯಾಗಿ, ವಿಟ್ಲ ವಿಧಾನಸಭಾ ಕ್ಷೇತ್ರದ ಸಮಿತಿ ಸದಸ್ಯರಾಗಿ, ಕಾರ್ಯದರ್ಶಿ ಯಾಗಿ, ಬಂಟ್ವಾಳ ಎಸ್.ಸಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಾಗಿ , ವಿಧಾನ ಸಭಾ ಕ್ಷೇತ್ರದ ಎರಡು ಬಾರಿ ಕಾರ್ಯದರ್ಶಿ ಯಾಗಿ , ಜಿಲ್ಲಾ ಎಸ್.ಸಿ.ಮೋರ್ಚಾದ ಜಿಲ್ಲಾಧ್ಯಕ್ಷರಾಗಿ , ಜಿಲ್ಲಾ ಕಾರ್ಯ ಕರಣಿ ಸದಸ್ಯ ರಾಗಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಅಮ್ಟೂರು ಅವರು ಇದೀಗ ಎಸ್.ಸಿ.ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ನೇಮಕವಾಗಿದ್ದಾರೆ.

ಜೊತೆಗೆ ವಿವಿಧ ಸಂಘಟನೆಗಳಲ್ಲಿ ಮತ್ತು ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿಸಿಕೊಂಡಿದ್ದಾರೆ.

More articles

Latest article