ಬಂಟ್ವಾಳ : ಅಮ್ಮೆಂಬಳ ಬಾಳಪ್ಪ ರ ಸಹಕಾರ ಚಿಂತನೆ ಇಂದು 13 ಶಾಖೆಗಳ ಮೂಲಕ ವಿಸ್ತಾರಗೊಂಡಿರುವುದು ಇಡೀ ಸಮಾಜಕ್ಕೆ ಹೆಮ್ಮೆ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಹೇಳಿದರು.



ಅವರು ಸಮಾಜ ಸೇವಾ ಸಹಕಾರಿ ಸಂಘ ನಿ.ಬಂಟ್ವಾಳ ಇದರ 13 ನೇ ಮೆಲ್ಕಾರ್ ಶಾಖೆ ಜ.14 ರಂದು ಗುರುವಾರ ಮೆಲ್ಕಾರ್ ಆರ್.ಆರ್.ಕಮರ್ಷಿಯಲ್ ಸೆಂಟರ್ ನಲ್ಲಿ ಉದ್ಘಾಟನೆ ನಡೆಸಿದ ಬಳಿಕ ಆಶೀರ್ವಚನ ನೀಡಿದರು.
ಸಮಾಜದ ಅಭಿವೃದ್ಧಿ ಹಾಗೂ ಅಭ್ಯುದಯ ಕ್ಕೆ ಬಾಳಪ್ಪ ಹಾಗೂ ಹೂವಯ್ಯರು ಕನಸು ಕಂಡಿದ್ದರು, ಕಷ್ಟದಲ್ಲಿಯೇ ಆರಂಭವಾಗಿದ್ದರೂ, ಇಂದು ಲಾಭದಲ್ಲಿ ಮುಂದುವರಿದಿದೆ, ಇದು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಕ್ರಿಯಾಶೀಲತೆಯನ್ನು ತೋರಿಸುತ್ತದೆ.
ಆರ್ಥಿಕ ಅಭಿವೃದ್ಧಿ ಯ ಕನಸುಸಾಕಾರಗೊಳ್ಳಲಿ, ಮಧ್ಯಮ ಕ್ಷೇತ್ರದ ವ್ಯವಹಾರ ಕ್ಕೆ ಸಹಕಾರಿಬ್ಯಾಂಕ್ ಗಳ ಕೊಡುಗೆ ಮಹತ್ತರವಾದದ್ದು , ಸ್ವಸಹಾಯ ಸಂಘಗಳ ಪ್ರಾಮಾಣಿಕತನ ಬ್ಯಾಂಕಿನ ಆರ್ಥಿಕ ಚೈತನ್ಯಕ್ಕೆ ಕಾರಣವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.
ರಾಷ್ಟ್ರೀಕೃತ ಬ್ಯಾಂಕ್ ಗಳು ಗ್ರಾಮೀಣ ಭಾಗದ ಬಡ ದುರ್ಬಲ ವರ್ಗದ ಜನತೆಗೆ ನ್ಯಾಯಯುತವಾಗಿ ಸೌಲಭ್ಯಗಳು ಅನುಕೂಲವಾಗುವ ನಿಟ್ಟಿನಲ್ಲಿ ಸಿಗಬೇಕಾದ ಅನಿವಾರ್ಯತೆ ಇದೆ, ಪ್ರಧಾನ ಮಂತ್ರಿಯವರ ಚಿಂತನೆ, ಯೋಜನೆ ಗಳು ಮಧ್ಯಮ ವರ್ಗದ ಜನರಿಗೆ ಸಕಾಲದಲ್ಲಿ ಸಿಗುವಂತೆ ಆಗಬೇಕಾಗಿದೆ ಎಂದು ಅವರು ಹೇಳಿದರು.
ದೇಶದ ಜಿ.ಡಿ.ಪಿ.ಏರಿಕೆಯಾಗಬೇಕಾದರೆ ಮಧ್ಯಮ ವರ್ಗದ ಜನ ಅಭಿವೃದ್ಧಿ ಯಾಗಬೇಕಾಗಿದೆ.
ಮಧ್ಯಮ ವರ್ಗದ ಜನತೆಗೆ ಆರ್ಥಿಕ ವ್ಯವಸ್ಥೆ ಸಹಾಯ ಮಾಡಿದ್ದು ಸಹಕಾರಿ ಸಂಘಗಳು.
ಹಿಂದುಳಿದ ವರ್ಗದ ಜನರ ಆರ್ಥಿಕ ಪುನಶ್ಚೇತನದ ದೃಷ್ಟಿಯಿಂದ ಸಹಕಾರಿ ಸಂಘವನ್ನು ಸ್ಥಾಪಿಸಿದದ್ದೇವೆ ಎಂದು ಸ್ಥಾಪಕರಾದ ಅಮ್ಮೆಂಬಳ ಬಾಳಪ್ಪ ಹಾಗೂ ಹೂವಯ್ಯ ಮೂಲ್ಯ ಬಾಳೆಹಿತ್ಲು ಕನಸು ನನಸಾಗುವ ನಿಟ್ಟಿನಲ್ಲಿ ಬ್ಯಾಂಕ್ ಬೆಳವಣಿಗೆ ಕಾಣಬೇಕು ಎಂದು ಅವರು ಹೇಳಿದರು.
ಸ್ವಸಹಾಯ ಸಂಘಗಳು ಇನ್ನಷ್ಟು ಬೆಳವಣಿಗೆ ಯಾದರೆ ಸಹಕಾರಿ ಸಂಘ ಅಭಿವೃದ್ಧಿ ಗೆ ಸಹಾಯವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಸಮಾಜ ಸೇವಾ ಸಹಕಾರಿ ಸಂಘ ಬ್ಯಾಂಕಿಗ್ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದೆ ಎಂದು ಅವರು ಹೇಳಿದರು.
ಸಹಕಾರಿ ಸಂಘಗಳ ಬೆಳವಣಿಗೆಗೆ ಶಾಖೆಯ ಸಿಬ್ಬಂದಿಗಳ ಪ್ರೀತಿಯ ಸೇವೆಯ ಜೊತೆಗೆ ಗ್ರಾಹಕರ ವಿಶ್ವಾಸಾರ್ಹ ಸಹಕಾರ ಕೂಡ ಅತೀ ಅಗತ್ಯ ಎಂದು ಅವರು ಹೇಳಿದರು.
ಸಹಕಾರಿ ಸಂಘಗಳು ಜಿಲ್ಲೆಯ ಆರ್ಥಿಕ ಚೈತನ್ಯ ವನ್ನು ಹೆಚ್ಚಿಸಿದೆ, ಐದು ರಾಷ್ಟ್ರೀಯ ಬ್ಯಾಂಕುಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿಯೇ ಹುಟ್ಟಿರುವುದು ನಮ್ಮ ಹೆಮ್ಮೆ ಎಂದರು. ಸಾಲವಸೂಲಾತಿಯಲ್ಲಿಯೂ ಮುನ್ನಡೆ ಕಾಣುವುದು ಬ್ಯಾಂಕ್ ಹಾಗೂ ಗ್ರಾಹಕರ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಆರ್ಥಿಕ ಪುನಶ್ಚೇತನ ನೀಡುವ ಸಹಕಾರಿ ಸಂಘ ಗ್ರಾಮೀಣ ಭಾಗದ ಜನರ ಜೀವನಕ್ಕೆ ಪ