Wednesday, October 18, 2023

ಶಾಲಾ ಕಾರ್ಯಕ್ರಮಗಳು ಮತ್ತು ಸಮಾಜದ ಕೊಡುಗೆಗಳು

Must read


ಲೇ: ರಮೇಶ ಎಂ ಬಾಯಾರು ಎಂ.ಎ; ಬಿ.ಇಡಿ

ವಿದ್ಯಾಲಯ ಮತ್ತು ದೇವಾಲಯಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಹೋಲಿಸಿದರೆ ವಿದ್ಯಾಲಯಗಳಲ್ಲೇ ಅತ್ಯಧಿಕ ಕಾರ್ಯಕ್ರಮಗಳು ನಡೆಯುತ್ತಿವೆಯೇನೋ ಎಂದೆನಿಸುತ್ತದೆ. ದೇವಾಲಯಗಳಲ್ಲಿ ಹಬ್ಬಹರಿದಿನಗಳು, ವಾರ್ಷಿಕ ಜಾತ್ರೆ ಮತ್ತು ವಿಶೇಷವಾದ ಆಚರಣೆಗಳು ನಡೆಯುತ್ತವೆ ಎಂದು ಪರಿಗಣಿಸಿದರೆ ಸರಾಸರಿಯಾಗಿ ತಿಂಗಳಿಗೆ ಒಂದೋ ಎರಡೋ ಕಾರ್ಯಕ್ರಮಗಳು ಜರಗುತ್ತವೆ. ಇದಕ್ಕಿಂತಲೂ ಅಧಿಕ ಕಾರ್ಯಕ್ರಮಗಳು ನಡೆಯುವ ಪೂಜಾ ಮಂದಿರಗಳಿದ್ದರೆ ಅವು ಕೆಲವಷ್ಟೇ ಇರಬಹುದು.

ಶಾಲಾರಂಭ ಪ್ರತೀ ವರ್ಷದ ಜೂನ್ ಎಂದು ಪರಿಭಾವಿಸಿದರೆ ವಿಶ್ವ ಪರಿಸರ ದಿನವೇ ಮೊದಲ ಕಾರ್ಯಕ್ರಮವಾಗುತ್ತದೆ. ಇದೇ ತಿಂಗಳಿನಲ್ಲಿ ಜಲಮರುಪೂರಣ ಕಾರ್ಯಕ್ರಮವೂ ಆರಂಭವಾಗುತ್ತದೆ. ಜುಲೈಯಲ್ಲಿ ವನಮಹೋತ್ಸವ, ಕರಾವಳಿ ಜಿಲ್ಲೆಗಳಲ್ಲಿ ಆಟಿ ಮೇಳ ಹೀಗೆ ಶಾಲಾರಂಭದಿಂದಲೇ ಕಾರ್ಯಕ್ರಮಗಳ ಭರಾಟೆಯಿರುತ್ತದೆ. ಸಾಂಪ್ರದಾಯಿಕ ಆಚರಣೆಗಳು, ಸರಕಾರದ ಸುತ್ತೋಲೆಯಂತೆ ಆಚರಿಸಲ್ಪಡುವ ರಾಷ್ಟ್ರೀಯ ಹಬ್ಬಗಳು, ಪ್ರಾದೇಶಿಕ ಹಬ್ಬಗಳು, ಧಾಮರ್ಿಕ ಹಬ್ಬಗಳು, ವಿವಿಧ ಜಯಂತಿಗಳು, ಶಾಲಾ ಹಂತದಿಂದ ಆರಂಭಗೊಂಡು ರಾಷ್ಟ್ರ ಹಂತದ ತನಕ ನಡೆಸಬೇಕಾದ ಇಲಾಖೆ ಆದೇಶಿಸುವ ಕ್ರೀಡಾ ಕೂಟಗಳು, ಪಂದ್ಯಾಟಗಳು, ಪ್ರತಿಭಾ ಕಾರಂಜಿ, ಕಲೋತ್ಸವ, ವಿಜ್ಞಾನ ನಾಟಕ, ನಲಿಕಲಿ ಮೇಳ, ಗಣಿತ ಮೇಳ ಇತ್ಯಾದಿ ಸಹಪಠ್ಯ ಕಾರ್ಯಕ್ರಮಗಳು, ಸಮುದಾಯದತ್ತ ಶಾಲೆ, ಶಾಲಾ ವಾರ್ಷಿಕೋತ್ಸವ, ಪಾಲಕರ ಸಭೆ, ಸಮುದಾಯ ಜಾಗೃತಿ ಕಾರ್ಯಕ್ರಮಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನಿರ್ದೇಶನದಂತೆ  ಜರಗುವ ವಿದ್ಯಾರ್ಥಿ   ಸಮುದಾಯ ಕೇಂದ್ರಿತ ಕಾರ್ಯಕ್ರಮಗಳು ಹೀಗೆ ಅಸಂಖ್ಯ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯುತ್ತಿವೆ. ನಡೆಯುತ್ತಿರಲೇ ಬೇಕು. ಶಾಲೆಗಳಲ್ಲಿ ಅತ್ಯಧಿಕ ಕಾರ್ಯಕ್ರಮಗಳಾಗುತ್ತಿದ್ದರೆ ಅದರಿಂದ ವಿದ್ಯಾಥರ್ಿಗಳ ಶೈಕ್ಷಣಿಕ ವಿಕಾಸವಾಗುವುದು ಖಂಡಿತ. ಶಿಕ್ಷಣದ ಪರಿಕಲ್ಪನೆಯು ಓದು ಬರಹ ಮತ್ತು ಗಣಿತಗಳಿಗೆ ಸೀಮಿತವಲ್ಲ.
ಶಾಲೆಗಳ ಕಾರ್ಯಕ್ರಮಗಳು ಅಧಿಕವಾದಂತೆ ಸಮುದಾಯದ ಮೇಲೆ ಒತ್ತಡಗಳು ಸಹಜವಾಗಿ ಹೇರಲ್ಪಡುತ್ತಿವೆ. ಆದರೆ ಯಾವುದೇ ಸಮುದಾಯ ತನ್ನ ಮೇಲೆ ಬೀಳುವ ಹೊರೆಗಳಿಗಾಗಿ ಗೊಣಗುತ್ತಾ ಇರುವುದಿಲ್ಲ ಎಂಬುದೇ ಶೈಕ್ಷಣಿಕ ಕ್ಷೇತ್ರಕ್ಕೆ ಅತ್ಯಧಿಕ ಸಮಾಧಾನದ ಸಂಗತಿಯಾಗಿದೆ. ಅದರಲ್ಲೂ ಸರಕಾರಿ ಮತ್ತು ಅನುದಾನಿತ ಶಾಲೆಗಳ ಪಾಲಕರ ಕೊಡುಗೆಗಳನ್ನು ಪ್ರಶಂಸೆ ಮಾಡಲೇ ಬೇಕಾಗಿದೆ. ಇಂದಿನ ಶೈಕ್ಷಣಿಕ ವಾತಾವರಣವನ್ನು ಸರಿಯಾಗಿ ಅವಲೋಕನ ಮಾಡಿದರೆ ಅತ್ಯಂತ ಬಡ ಕುಟುಂಬದ ಮಕ್ಕಳೇ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಹೋಗುತ್ತಾರೆ. ಮಧ್ಯಮವರ್ಗವೂ ಸೇರಿದಂತೆ ಆಥರ್ಿಕವಾಗಿ ಅಷ್ಟೇನೂ ಸಮಸ್ಯೆ ಕಾಣದವರ ಮನೆಗಳ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಶ್ರೀಮಂತ ಮತ್ತು ಮಧ್ಯಮ ವರ್ಗದ ಬೆರಳೆಣಿಕೆಯ ಕುಟುಂಬಗಳು ಮಾತ್ರವೇ ಸರಕಾರಿ ಮತ್ತು ಖಾಸಗೀ ಶಾಲೆಗಳನ್ನು ಇಷ್ಟಪಡುತ್ತಾರೆ. ಈ ಆಕರ್ಷಣೆ ಮತ್ತು ವಿಕರ್ಷಣೆಗಳಿಗೆ ಶಿಕ್ಷಣ ಮಟ್ಟ ಕಾರಣವಲ್ಲ, ಮಾಧ್ಯಮವೊಂದೇ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸ ಬೇಕಾಗಿಲ್ಲ.
ಸರಕಾರಿ ಮತ್ತು ಅನುದಾನಿತ ಶಾಲೆಗಳ ಪಾಲಕರು ಶಾಲೆಗಳ ಕಾರ್ಯಕ್ರಮಗಳಲ್ಲಿ ಚಪ್ಪರ, ತೋರಣ, ಅಡುಗೆ, ಸ್ವಾಗತ, ಆತಿಥ್ಯ, ಊಟೋಪಚಾರ ಹೀಗೆ ಪ್ರತೀ ಹಂತಗಳಲ್ಲೂ ಸ್ವಯಂ ಪ್ರೇರಣೆಯಿಂದ ನೆರವಾಗುತ್ತಿದ್ದಾರೆ, ಶಾಲೆ ಮತ್ತು ಸಮುದಾಯಗಳ ನಡುವೆ ಅನ್ಯೋನ್ಯತೆಯಿರುವಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದುದರಿಂದ ಇಂದು ಸರಕಾರೀ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಎಲ್ಲ ಕಾರ್ಯಕ್ರಮಗಳೂ ಅತ್ಯಂತ ಯಶಸ್ವಿಯಾಗುತ್ತಿವೆ. ನಮ್ಮಶಾಲೆ ಎಂಬ ಅಭಿಮಾನ ಪಾಲಕರಲ್ಲಿ ತುಂಬಿ ತುಳುಕುವುದರಿಂದಾಗಿ ನೆರವಿನ ಹೊಳೆ ಹರಿದು ಬರುತ್ತಿದೆ ಎಂದು ಎದೆತಟ್ಟಿ ಹೇಳಬಹುದು.
ಈ ಲೇಖನದ ಮೂಲಕ ನಾನು ಪಾಲಕರಿಗೆ ಕೆಲವು ಸಲಹೆಗಳನ್ನೂ ನೀಡಲು ಬಯಸುತ್ತೇನೆ. ಈ ಸಲಹೆಗಳ ಬಹು ಅಂಶಗಳನ್ನು ಕೆಲವು ಶಾಲೆಗಳಲ್ಲಿ ಈಗಾಗಲೇ ಪಾಲಿಸುತ್ತಿದ್ದಾರೆ. ಆದರೆ ಇದನ್ನು ಗರಿಷ್ಠಗೊಳಿಸಬೇಕಾದ ಅನಿವಾರ್ಯತೆ ಮತ್ತು ಎಲ್ಲ ಹಿರಿಯ ಪ್ರಾಥಮಿಕ. ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಅನುಷ್ಠಾನಿಸಲೇ ಬೇಕಾಗಿದೆ. ಇದು ಮಕ್ಕಳ ಜ್ಞಾನವಿಕಾಸ ಮತ್ತು ಮೌಲ್ಯವಿಕಾಸಕ್ಕೆ ಪೂರಕವಾದ ವಿಚಾರಗಳಾಗಿವೆ. ಶಾಲಾ ಸಮುದಾಯ ಮತ್ತು ಶಿಕ್ಷಕರು ಒಟ್ಟು ಸೇರಿ ಚಿಂತನೆ ಮಾಡುವುದರೊಂದಿಗೆ ಈ ಕಾರ್ಯಕ್ರಮಗಳು ಜರಗಬೇಕು. ಒಂದು ದಿನ ಒಂದು ತರಗತಿಗೆ, ಮರುದಿನ ಇನ್ನೊಂದು ತರಗತಿಗೆ ಎಂದರೆ ವಾರದ ಐದು ದಿನಗಳಲ್ಲಿ ಒಂದಲ್ಲ ಒಂದು ತರಗತಿಗೆ ಈ ಕಾರ್ಯಕ್ರಮಗಳು ನಡೆಯಬೇಕು. ಶನಿವಾರದ ಅಂತಿಮ ಅವಧಿಗಳನ್ನು ಶಾಲೆಯ ಎಲ್ಲ ಮಕ್ಕಳಿಗೂ ಪೂರಕವಾಗಿ ಈ ಯೋಜನೆ ರೂಪಿಸ ಬೇಕು.
ನಾನು ಮುಂದೆ ಹೇಳಲಿರುವ ಶೈಕ್ಷಣಿಕ ಪೂರಕ ಯೋಜನೆಗೆ ಯಾವುದೇ ವೆಚ್ಚಗಳಾಗಬಾರದು. ವಾರದ ಎರಡು ಯಾ ಮೂರು ಅವಧಿಗಳ ಸಮಯದ ವೆಚ್ಚ ಮಾತ್ರವೇ ಸಾಕಾಗುತ್ತದೆ. ಇದೊಂದು ವಿದ್ಯಾಥರ್ೀ ಮಾರ್ಗದಶರ್ಿ ಯೋಜನೆಯಾಗಿದ್ದು ಮಕ್ಕಳ ಆಸಕ್ತಿವಲಯಗಳನ್ನು ಗಮನಿಸಿ ಅದರಲ್ಲಿ ಎರಡು ಅವಧಿ ಮತ್ತು ಎಲ್ಲರನ್ನೂ ಒಳಗೊಳಿಸಿ ಮೌಲ್ಯ ಶಿಕ್ಷಣ ನೀಡುವುದೇ ಈ ಮಾರ್ಗದಶರ್ಿ ಯೋಜನೆಯ ವ್ಯಾಪ್ತಿಯೊಳಗೆ ಸೇರುವಂತಾಗಬೇಕು. ಯಕ್ಷಗಾನ, ಭರತನಾಟ್ಯ, ಹಾಡುವಿಕೆ, ಕಥೆ ಹೇಳುವುದು, ಒಗಟುಗಳನ್ನು ಹೇಳುವುದು, ರಸಪ್ರಶ್ನೆ, ಸಾಹಿತ್ಯ ರಚನೆ, ನಾಟಕ, ಭಾಷಣ, ಕೃಷಿ, ಬೇಸಾಯ, ವ್ಯಾಪಾರ ಹೀಗೆ ಸಮುದಾಯ ವಿವಿಧ ಕ್ಷೇತ್ರಗಳನ್ನು ಗುರುತಿಸಿಕೊಳ್ಳಬೇಕು. ಈ ಕ್ಷೇತ್ರಗಳನ್ನು ಮಕ್ಕಳಿಗೆ ಪರಿಯಿಸಲು ಅನುಭವೀ ಸಂಪನ್ಮೂಲ ವ್ಯಕ್ತಿಗಳನ್ನು ಶಾಲಾ ಸಮುದಾಯ ಅಥವಾ ಹತ್ತಿರದ ಊರುಗಳ ಸಮುದಾಯದಿಂದ ಗುರುತಿಸಿಕೊಂಡು ಮಾಸಿಕ ಮತ್ತು ವಾಷರ್ಿಕ ವೇಳಾ ಪಟ್ಟಿಯೊಂದನ್ನು ಸಾಕಷ್ಟು ಪೂರ್ವಭಾವಿಯಾಗಿ ತಯಾರಿಸಿಕೊಳ್ಳಬೇಕು. ಈ ವೇಳಾ ಪಟ್ಟಿಯ ಅನುಷ್ಠಾನಕ್ಕೆ ಎಸ್ಡಿಎಂಸಿ ಅಧ್ಯಕ್ಷರ ಮುಂದಾಳತ್ವ ಮತ್ತು ಆಸಕ್ತ ಪಾಲಕರನ್ನೊಳಗೊಂಡ ಕಾರ್ಯಕಾರೀ ಸಮಿತಿಯನ್ನು ರಚಿಸಬೇಕು.
ಸರಕಾರ ಈಗಾಗಲೇ ಶಾಲೆಗೆ ಬನ್ನಿ ಶನಿವಾರ ಎಂಬ ಕಾರ್ಯಕ್ರಮ ರೂಪಿಸಿ ಸಣ್ಣ ಮಟ್ಟದಲ್ಲಿ ಯಶಸ್ವಿಯಾಗಿದೆ. ಸಂಪನ್ಮೂಲ ವ್ಯಕ್ತಿಗಳ ಸಂಯೋಜನೆ ಮತ್ತು ಅವರಿಗೆ ಮಕ್ಕಳನ್ನು ಜೋಡಿಸಿ ಕೊಡುವ ಕೆಲಸವನ್ನು ಶಾಲಾ ಮುಖ್ಯಸ್ಥರು ಮತ್ತು ಸಹ ಅಧ್ಯಾಪಕರ ನೆರವಿನೊಂದಿಗೆ ಈ ಕಾರ್ಯಕಾರೀ ಸಮಿತಿ ನಿರ್ವಹಿಸಬೇಕು. ಪೂರ್ಣವಾದ ಜವಾಬ್ದಾರಿಯನ್ನು ಬೋಧಕರಿಗೇ ನೀಡಿದರೆ ಅವರಿಗೆ ಹೊರೆಯಾಗುತ್ತದೆ. ಕಾರ್ಯಕಾರೀ ಸಮಿತಿಯು ಗಾತ್ರ ದೊಡ್ಡದಾದಂತೆ ಕಾರ್ಯ ಕ್ರಮ ಸಂಯೋಜನೆ ಹಗುರವಾಗುತ್ತದೆ. ಪ್ರತೀ ತಿಂಗಳಿಗೊಂದು ಕಾರ್ಯಕಾರೀ ಸಮಿತಿಯನ್ನೂ ವರ್ಷದಲ್ಲಿ ಒಂದೇ ಬಾರಿಗೆ ರಚಿಸಬಹುದಾಗಿದೆ. ಆದರೆ ಎಸ್ಡಿಎಂಸಿ ಅಧ್ಯಕ್ಷರ ನೇತೃತ್ವ ಇಡೀ ವರ್ಷಕ್ಕೂ ವಿಸ್ತೃತವಾಗಿರಬೇಕು.
ನಮ್ಮ ಊರ ಮಕ್ಕಳು ಸವರ್ಾಂಗೀಣವಾದ ಸಾಧಕರಾಗಲು ಇದರಿಂದ ಅನುಕೂಲವಾಗುತ್ತದೆ. ಯಾವುದೇ ದುರ್ಮನಸ್ಸುಗಳಿಲ್ಲದ ಗುಣಾನ್ವಿತ ಸಮಾಜ ನಿಮರ್ಾಣವಾಗಲು ಮಕ್ಕಳನ್ನು ಸಾಧಕರನ್ನಾಗಿಸುವುದೇ ಸೂಕ್ತ ಮಾರ್ಗವಾಗಿದೆ. ಆ ಸಾಧನಾ ಕ್ಷೇತ್ರಗಳಲ್ಲಿ ಸಮಾಜ ಸೇವೆ, ಕೃಷಿಯೂ ಸೇರಿರುತ್ತದೆ. ಇಂದು ನಾವೇನು ಕೂಲಿ ಕೆಲಸ ಎನ್ನುತ್ತೇವೆಯೋ ಅದು ಸೇವೆಯೇ ಆಗಿದೆ. ಒಬ್ಬ ಸರಕಾರಿ ನೌಕರನೂ ಸೇವಕ, ಕೂಲಿಯೂ ಸೇವಕನೇ ಆಗಿರುತ್ತಾನೆ. ಉದ್ಯೋಗದಲ್ಲಿ ಮೇಲ್ಮೆ ಕೀಳ್ಮೆಗಳ ಕಲ್ಪನೆ ತೊಲಗ ಬೇಕು. ಇಂದು ಕೆಲಸದವರಿಲ್ಲ ಎಂದು ಕೃಷಿ ಕ್ಷೇತ್ರ ಸೊರಗುತ್ತಿದೆ. ಬಿಳಿ ಕಾಲರ್ ಉದ್ಯೋಗದ ಆಸೆ, ಕಡಿಮೆ ಶ್ರಮದ ಮೂಲಕ ಸಂಪಾದನೆ ಮಾಡಬೇಕೆಂಬ ಮನೋವೃತ್ತಿ ಹಿನ್ನೆಲೆಗೆ ಸರಿಯಬೇಕು. ಕಾಯಕವೇ ಕೈಲಾಸ ಎಂಬ ಕಲ್ಪನೆ ಪ್ರತೀ ಮನಸ್ಸಿನೊಳಗೂ ಬಲವಾಗಿ ಬೇರೂರಿದ ಸಮಾಜ ಮುನ್ನೆಲೆಗೆ ಬರಬೇಕು. ಸಮಾಜ ಈ ಬಗ್ಗೆ ಚಿಂತನೆ ಮಾಡುವಂತಾಗಲಿ. ಇದು ಸರಕಾರೀ ಆದೇಶಿತ ಕಾರ್ಯಕ್ರಮವಲ್ಲ. ಮಕ್ಕಳನ್ನು ವಿಕಾಸದ ಪಥಕ್ಕೊಯ್ಯಲು ಸಮುದಾಯ ಚಿಂತಿತ ಕಾರ್ಯಕ್ರಮಗಳೂ ಅನುಷ್ಠಾನ ಮತ್ತು ಅನುಪಾಲನೆಯಾಗ ಬೇಕಾದ ಅಗತ್ಯ ಇದ್ದೇ ಇದೆಯಲ್ಲವೇ?

More articles

Latest article