ಮಂಗಳೂರು: ರಾಜೇಶ್ವರ್ ಪ್ರೌಢಶಾಲೆ ಅಡ್ಯಾರ್ ಪದವು ಇದರ ಹಳೆ ವಿದ್ಯಾರ್ಥಿಗಳ ಸ್ನೇಹ- ಸಮ್ಮಿಲನ ಕಾರ್ಯಕ್ರಮ ನಾಳೆ (ಜನವರಿ 26 ) ರಂದು ಬೆಳಿಗ್ಗೆ 9.30 ಕ್ಕೆ ಶಾಲಾ ಸಭಾಂಗಣದಲ್ಲಿ ನಡೆಯಲಿರುವುದು. 2022 ರಲ್ಲಿ ಈ ವಿದ್ಯಾಸಂಸ್ಥೆ 40 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಯೋಜನೆಗೊಂಡಿರುವ ಈ ಕಾರ್ಯಕ್ರಮ ದಲ್ಲಿ ಹಳೆವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕವೃಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


