Tuesday, October 24, 2023

ವಿಟ್ಲ: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ: ಒಟ್ಟು ಐದು ಮಂದಿ ಗಂಭೀರ, ಮಂಗಳೂರು ಆಸ್ಪತ್ರೆಗೆ ದಾಖಲು 

Must read

ವಿಟ್ಲ: ಎರಡು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಒಟ್ಟು ಐದು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲದ ಕಾಶಿಮಠದಲ್ಲಿ ನಡೆದಿದೆ.

ಕೇಪು ಕಡೆಯಿಂದ ವಿಟ್ಲ ಪೇಟೆಗೆ ಬಂದು ತನ್ನ ಸ್ನೇಹಿತನನ್ನು ಬೆಂಗಳೂರು ಬಸ್ ಗೆ ಬಿಡಲೆಂದು ಡಿಯೋ ವಾಹನದಲ್ಲಿ ಬರುತ್ತಿದ್ದಾಗ, ವಿಟ್ಲ ಕಡೆಯಿಂದ ಕನ್ಯಾನಕ್ಕೆ ಕಡೆಗೆ ತೆರಳುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಎರಡು ವಾಹನದಲ್ಲಿದ್ದ ಒಟ್ಟು ಐದು ಮಂದಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

More articles

Latest article