ಪುತ್ತೂರಿನ ಈಶ್ವರಮಂಗಲದಿಂದ ಭಾನುವಾರ ಮದುವೆ ಕಾರ್ಯಕ್ರಮಕ್ಕೆ ಹೊರಟ ಬಸ್ ಕೇರಳದ ಪೆರಿಯಾರಂ ಘಾಟ್‌ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದುರ್ಮರಣ ಹೊಂದಿದವರ ಬಗ್ಗೆ ವಿಷಾದವಿದೆ. ಇನ್ನು ಬದುಕಿ ಉಳಿದು ಆಸ್ಪತ್ರೆಯಲ್ಲಿ ಹಿಂಸೆ ಪಡುತ್ತಿರುವವರ ಬಗ್ಯೆ ಚಿಂತಿಸಬೇಕಾಗಿದೆ. ಬಸ್‌ನಲ್ಲಿ ಅಧಿಕ ಸಂಖ್ಯೆಯ ಪ್ರಯಾಣಿಕರಿದ್ದುದೇ ಈ ಅಪಘಾತಕ್ಕೆ ಕಾರಣವಾಗಿದೆ. ಈ ಅಪಘಾತಕ್ಕೆ ಚಾಲಕನ ನಿರ್ಲಕ್ಷ ಎಂದು ಕಂಡು ಬಂದರೂ ಬಸ್ ಕಾಂಟ್ರಾಕ್ಟ್ ವಹಿಸಿಕೊಂಡವರು ಮಿತಿಮೀರಿದ ಜನರನ್ನು ಬಸ್‌ನಲ್ಲಿ ತುಂಬಿಸಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಬಸ್ ಮಾಲಕರು, ಚಾಲಕರು ಹಾಗೂ ಮದುವೆಯ ಬಸ್ ವಹಿಸಿಕೊಂಡವರು ಮೂವರೂ ಅಪಘಾತಕ್ಕೆ ಜವಾಬ್ದಾರರಾಗುತ್ತಾರೆ.
ನಾವು ಜರ್ಮನಿಗೆ ಹೋದಾಗ 9 ಜನರ ಪ್ರವಾಸಕ್ಕಾಗಿ ವಾಹನ ನಿಗದಿ ಪಡಿಸಿದ್ದೆವು. ಅಲ್ಲಿ ಇದ್ದ ಪರಿಚಿತರೊಬ್ಬರನ್ನು ಕುಳ್ಳಿರಿಸಿಕೊಳ್ಳಲು 3 ಸೀಟುಗಳು ಖಾಲಿ ಇದ್ದರೂ ಕುಳಿತುಕೊಳ್ಳಲು ಆಕ್ಷೇಪಿಸಿದ ಹಾಗೂ ನಿರ್ದಾಕ್ಷಿಣ್ಯವಾಗಿ ವರ್ತಿಸಿದ. ಆ ಕ್ಷಣದಲ್ಲಿ ಅಲ್ಲಿಯ ಚಾಲಕ ನಮಗೆ ನಿಷ್ಕರುಣಿಯಾಗಿ ಅನಿಸಿದರೂ ಅವರ ಶಿಸ್ತನ್ನು ಮೆಚ್ಚಲೇಬೇಕಾಗಿದೆ.
ಲಂಡನ್‌ನಲ್ಲಿ ನನಗೊಂದು ಸನ್ಮಾನ ಏರ್ಪಡಿಸಿದ್ದರು. ಆ ಕಾರ್ಯಕ್ರಮದಲ್ಲಿ ನಿಗದಿಯಾದ ಸಂಖ್ಯೆಗಿಂತ ಹೆಚ್ಚು ಒಬ್ಬರನ್ನೂ ಹಾಲ್‌ನ ಒಳಗೆ ಬಿಡಲಿಲ್ಲ. ನಮ್ಮಜೊತೆ ಬಂದವರೆ ಹೊರಗೆ ಉಳಿಯ ಬೇಕಾಯಿತು.
ಈ ಅಪಘಾತದಲ್ಲಿ ಮಡಿದವರ ಬಗ್ಗೆ ಸಂತಾಪ ಸೂಚಿಸುತ್ತಾ, ನಮ್ಮ ದೇಶದಲ್ಲಿ ಎಲ್ಲರೂ ಶಿಸ್ತು ಮತ್ತು ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ಆಶಿಸಿದ್ದಾರೆ.



ಡಿ. ವೀರೇಂದ್ರ ಹೆಗ್ಗಡೆಯವರು