Monday, October 23, 2023

ಪಾಣತ್ತೂರು ಬಸ್ ದುರಂತ: ಮೃತ ನಿರ್ವಾಹಕ ಬಂಟ್ವಾಳ ನಾಯಿಲ ನಿವಾಸಿ

Must read

ಬಂಟ್ವಾಳ : ಪುತ್ತೂರು ತಾಲೂಕಿನ ಬಲ್ನಾಡುವಿನ ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಭಾನುವಾರ ಪಲ್ಟಿಯಾಗಿ ಬಸ್‌ನಲ್ಲಿದ್ದ ಬಂಟ್ವಾಳದ ಒಬ್ಬರು, ಸುಳ್ಯದ ಒಬ್ಬರು ಹಾಗೂ ಪುತ್ತೂರು ತಾಲೂಕಿನ ಐವರು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ.

ಬಸ್ ನಿರ್ವಾಹಕ ನರಿಕೊಂಬು ಸಮೀಪದ ನಾಯಿಲ ಬೋರುಗುಡ್ಡೆ ನಿವಾಸಿ ಶಶಿಧರ ಪೂಜಾರಿ(43), ಬಲ್ನಾಡು ಚನಿಲ ಪಾಲೆಚ್ಚಾರು ಚೋಮ ನಾಯ್ಕರವರ ಪುತ್ರ ರಾಜೇಶ್(38.ವ) ಅವರ ಪುತ್ರ ಆದರ್ಶ(14ವ), ಕುಂಜೂರುಪಂಜ ದೇವಸ್ಯ ನಾರಾಯಣರವರ ಪುತ್ರಿ ಸುಮತಿ(26), ಆರ್ಲಪದವು ಅರ್ಧಮೂಲೆ ನಾರಾಯಣರವರ ಪುತ್ರ ಶ್ರೇಯಸ್(13.ವ), ಸುಳ್ಯ ಸೋಣಂಗೇರಿ ಕುಕ್ಕಂದೂರು ನಾರಾಯಣ ನಾಯ್ಕರವರ ಪುತ್ರ ರವಿಚಂದ್ರ(40.ವ) ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಸಮೀಪದ ಕಳೆಂಜಿಲ ವಸಂತ ನಾಯ್ಕ ಪತ್ನಿ ಸೇಸಮ್ಮ ಯನೆ ಜಯಲಕ್ಷ್ಮೀ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಬಲ್ನಾಡು ಗ್ರಾಮದ ಚನಿಲ ಪಾಲೆಚ್ಚಾರು ಕೊಗ್ಗು ನಾಯ್ಕರವರ ಪುತ್ರಿ ಅರುಣಾರವರ ವಿವಾಹವು ಮಡಿಕೇರಿ ತಾಲೂಕು ಕರಿಕೆ ಗ್ರಾಮದ ಕುಂಡತ್ತಿಕಾನ ಚೆನ್ನಪ್ಪ ನಾಯ್ಕರವರ ಪುತ್ರ ಪ್ರಶಾಂತ್ ಕುಮಾರ್ ಜೊತೆ ಜ.3 ರಂದು ವರನ ಮನೆಯಲ್ಲಿ ನಿಗಧಿಯಾಗಿತ್ತು.

ಅದರಂತೆ ವಧುವಿನ ಮನೆಯಿಂದ ಬೆಳಿಗ್ಗೆ ಖಾಸಗಿ ಬಸ್‌ನಲ್ಲಿ ದಿಬ್ಬಣ್ಣ ಹೊರಟ್ಟಿದ್ದ ಬಸ್ ಸುಳ್ಯ-ಪಾಣತ್ತೂರು ಅಂತರ್ ರಾಜ್ಯ ರಸ್ತೆಯ ಮೂಲಕ ವರನ ಮನೆಗೆ ತೆರೆಳುತ್ತಿದ್ದ ಬಸ್ ಕಾಸರಗೋಡು ಜಿಲ್ಲೆಯ ವೆಲ್ಲಿಕುಂಡು ತಾಲೂಕಿನ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿರುವ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ವಾಸ್ತವ್ಯವಿಲ್ಲದ ಮನೆಯೊಂದರ ಮೇಲೆ ಉರುಳಿಬಿದ್ದಿದೆ. ಘಟನೆಯಿಂದಾಗಿ ಬಸ್‌ನಲ್ಲಿದ್ದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 60 ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಬಸ್‌ನಲ್ಲಿದ್ದ 12 ಮಂದಿ ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಪ ಸ್ವಲ್ಪ ಗಾಯಗೊಂಡವರನ್ನು ಕಾಂಞಗಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಧು ಹಾಗೂ ಮನೆ ಮಂದಿ ಬೇರೊಂದು ವಾಹನದಲ್ಲಿ ತೆರಳುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ. ಮೃತದೇಹವನ್ನು ಕಾಂಞಂಗಾಡ್ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕಳುಹಿಸಿಕೊಡಲಾಗಿದೆ. ಗಾಯಗೊಂಡವರ ಪೈಕಿ ಸುಳ್ಯಪದವು ಪದಡ್ಕ ನಿವಾಸಿ ಶಿವಪ್ಪ ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಶ್ವರಮಂಗಲ ಪಡುವನ್ನೂರು ಗ್ರಾಮದ ಮುಗುಳಿ ನಿವಾಸಿ ಯಶೋಧರ ಹಾಗೂ ಅವರ ಜಯಲತಾರವರು ಕಾಂಞಂಗಾಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಂಪ್ಯ ಠಾಣಾ ಎಸ್‌ಐ ಉದಯ ರವಿ, ಎಎಸ್‌ಐ ತಿಮ್ಮಯ್ಯ ಹಾಗೂ ಸಿಬಂದಿಗಳಾದ ದಯಾನಂದ ಮೊದಲಾದವರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.

 

*ನಾಯಿಲದಲ್ಲಿ ಶೋಕ*

ಮೂಲತಃ ಉಪ್ಪಿನಂಗಡಿ ಸಮೀಪದ ಕರಾಯ ನಿವಾಸಿಯಾಗಿದ್ದ

ಶ್ರೀಧರ ಪೂಜಾರಿಯವರ ಪುತ್ರ ಶಶಿಧರ ಪೂಜಾರಿಯವರು, ಕಳೆದ ಹಲವು‌ ವರ್ಷಗಳಿಂದ ನಾಯಿಲ ಬೋರುಗುಡ್ಡೆಯಲ್ಲಿ ವಾಸ್ತವ್ಯವಿದ್ದರು. ಸ್ನೇಹ ಜೀವಿಯಾಗಿದ್ದ ಇವರ ಅಕಾಲಿಕ ಮರಣ ಗ್ರಾಮದಲ್ಲಿ ಶೋಕದ ಛಾಯೆಮೂಡಿಸಿದೆ. ಮೃತರು ಪತ್ನಿ ಹಾಗೂ ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ.

More articles

Latest article