ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ಅಭ್ಯಾಸ ವರ್ಗದ ಸಮಾರೋಪ ಸಮಾರಂಭವು ಶಕ್ತಿನಗರದ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಸುಮನಸ ಸಭಾಭವನದಲ್ಲಿ ನೆರವೇರಿತು .
ಸಮಾರೋಪ ಸಮಾರಂಭದ ಭಾಷಣವನ್ನು ಅಭಾವಿಪ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ಅವರು ಮಾಡಿ , ವಿದ್ಯಾರ್ಥಿ ಪರಿಷತ್ ನ ಬಗ್ಗೆ , ಕಾರ್ಯಗಳ ಬಗ್ಗೆ , ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು .
ಈ ಸಮಾರೋಪ ಸಮಾರಂಭದಲ್ಲಿ ವಿಭಾಗ ಪ್ರಮುಖರಾದ ಕೇಶವ ಬಂಗೇರರವರು ಮಂಗಳೂರು ಮಹಾನಗರದ ನೂತನ ಕಾರ್ಯಕಾರಿಣಿ ಘೋಷಿಸಿದರು.
ಮಂಗಳೂರು ಮಹಾನಗರದ ಅಧ್ಯಕ್ಷರಾಗಿ ಭಾರತಿ ಪ್ರಭು ಅವರು ಮರು ಆಯ್ಕೆಯಾದರು ಉಪಾಧ್ಯಕ್ಷರಾಗಿ ಉಪನ್ಯಾಸಕರಾದ ಚಂದ್ರಶೇಖರ್ , ಯತೀಶ್ , ಶ್ರೀನಿವಾಸ್ ಆಯ್ಕೆಯಾದರು.
ಮಂಗಳೂರು ಮಹಾನಗರದ ಕಾರ್ಯದರ್ಶಿಯಾಗಿ ಎಸ್. ಡಿ.ಎಂ ಕಾನೂನು ಕಾಲೇಜಿನ ಶ್ರೇಯಸ್ ಶೆಟ್ಟಿ ಅವರು ಆಯ್ಕೆಯಾದರು.
ಸಹ ಕಾರ್ಯದರ್ಶಿಗಳಾಗಿ ಶ್ರೇಯಸ್ , ಕಿರಣ್ , ಸ್ವಸ್ತಿಕ್ , ಆತ್ಮಿಕ ಆಯ್ಕೆಯಾದರು .
ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಆಗಿ ಸುಶಾನ , ತಾಲೂಕು ಸಂಚಾಲಕರಾಗಿ ನಿಶಾನ್ ಆಳ್ವ , ನಗರ ವಿದ್ಯಾರ್ಥಿನಿ ಪ್ರಮುಖ್ ಶ್ರೀ ಲಕ್ಷ್ಮಿ , ಹಾಸ್ಟೆಲ್ ಪ್ರಮುಖ ಕೀರ್ತನ್ , ಸೇವಾ ಪ್ರಮುಖ್ ಸಂತೋಷ್ , ಕಲಾಮಂಚ್ ಪಮುಕ್ ವಿನ್ಯಾಸ ,ವೃತ್ತಿಪರ ಶಿಕ್ಷಣ ಪ್ರಮುಖ ಶ್ರೀಪಾದ್ ತಂತ್ರಿ , ಸಾಮಾಜಿಕ ಜಾಲತಾಣ ಪ್ರಮುಖ ಆದಿತ್ಯ , ಕಾರ್ಯಾಲಯ ಕಾರ್ಯದರ್ಶಿ ಆದಿತ್ಯ ಶೆಟ್ಟಿ , ಎಸ್.ಎಫ್.ಡಿ ಪ್ರಮುಖ್ ವರುಣ ಸಿಂಗಾಲ ಹೋರಾಟ ಪ್ರಮುಖ್ ಪ್ರಣಾಮ್ ಮತ್ತು ನೀಲೇಶ್ ಆಯ್ಕೆಯಾದರು .
ನೂತನವಾಗಿ ಆಯ್ಕೆಯಾದ ನಗರ ಕಾರ್ಯದರ್ಶಿ ಅವರಿಗೆ ನಗರ ಕಾರ್ಯದರ್ಶಿಯಾಗಿದ್ದ ಮಣಿಕಂಠ ಕಳಸ ಇವರು ಎಬಿವಿಪಿಯ ಧ್ವಜವನ್ನು ನೀಡುವ ಮೂಲಕ ಜವಾಬ್ದಾರಿಯನ್ನು ಹಸ್ತಾಂತರಿಸಿದರು .
ಅ.ಭಾ.ವಿ.ಪ ಹಿರಿಯರಾದ ಡಾ.ಚ.ನ ಶಂಕರರಾಯ ಉಪಸ್ಥಿತರಿದ್ದರು .