Sunday, October 22, 2023

ವಿಟ್ಲ : ಪರ್ಲೋಟು ಅಬೂಬಕ್ಕರ್ ಸಿದ್ದೀಕ್ ಮಸ್ಜಿದ್ ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಪಿ.ಕೆ.

Must read

ವಿಟ್ಲ : ಪರ್ಲೋಟು ಅಬೂಬಕ್ಕರ್ ಸಿದ್ದೀಕ್ ಮಸ್ಜಿದ್ ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಪಿ.ಕೆ. ಆಯ್ಕೆಯಾಗಿದ್ದಾರೆ.

ಮಸೀದಿ ಗೌರವಾದ್ಯಕ್ಷ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಪಿ.ಕೆ.ಆದಂ ದಾರಿಮಿ ಅವರ ಅದ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾದ್ಯಕ್ಷರಾಗಿ ಹಮೀದ್ (ಅಮ್ಮಿ)ಪರ್ಲೋಟು, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಪರ್ಲೋಟು, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್ ಪಿ.ಕೆ, ಕೋಶಾಧಿಕಾರಿಯಾಗಿ ಪಿ.ಕೆ ಅಬ್ಬಾಸ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಕೆ.ಬಿ.ಕಾಸಿಂ ಹಾಜಿ, ಅಬ್ದುಲ್ ಖಾದರ್ ದರ್ಬಾರ್, ಪಿ.ಕೆ.ಝುಬೈರ್ ಆರ್ಟಿಒ, ಇಸಾಕ್ ಕೌಸರಿ, ಇಸ್ಮಾಯಿಲ್ ಕೆ.ಬಿ, ಹೈದರ್ ಬೋಳಿಯಾರ್, ಜುನೈದ್ ಪರ್ಲೋಟ್ಟು ಹಾಗೂ ಇಬ್ರಾಹಿಂ ಕೊಡಾಜೆ ಅವರನ್ನು ನೇಮಿಸಲಾಯಿತು.

More articles

Latest article