Sunday, April 7, 2024

ಬಾಲಕನ ಅಪಹರಣದ ಹಿಂದೆ ಹಣದ ವಹಿವಾಟು

ಬೆಳ್ತಂಗಡಿ: ಉಜಿರೆಯ ಬಾಲಕ ಅಪರಹಣ ಹಿಂದೆ ಹಣದ ವ್ಯವಹಾರದ ಶಂಕೆ ವ್ಯಕ್ತವಾಗಿದೆ.
ಬಾಲಕ ಅಪಹರಣ ಮಾಡಿದ ಆರೋಪಿಗಳು 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ಬೇಡಿಕೆ ಇಟ್ಟಿರುವುದಾಗಿ ಬಾಲಕನ ಅಜ್ಜ ಕೆ.ಶಿವನ್ ಬೆಳ್ತಂಗಡಿ ಠಾಣಾ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಉಜಿರೆಯ ಬಿಜೋಯ್ ಏಜೆನ್ಸಿಸ್ ಮಾಲೀಕ, ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ಡಿ.17 ರಂದು ಸಂಜೆ ಬಿಳಿ ಇಂಡಿಕಾ ಕಾರಿನಲ್ಲಿ ಮನೆಯ ಗೇಟ್ ಬಳಿಯಿಂದ ಅಪಹರಿಸಲಾಗಿತ್ತು.

ಬಾಲಕ ಅಜ್ಜ ಎಕೆ ಶಿವನ್ ವಾಕಿಂಗ್ ಹೋಗಿದ್ದಾಗ ಮೊಮ್ಮಗ ಆಟವಾಡಿ ಅಜ್ಜನ ಎದುರಿನಿಂದ ಮನೆ ಕಡೆಗೆ ಹೋಗುತ್ತಿದ್ದ. ಮನೆಯ ಗೇಟು ಬಳಿ ತಲುಪುತ್ತಿದ್ದಂತೆ ಅಲ್ಲಿಯೆ ನಿಂತಿದ್ದ ಬಿಳಿ ಬಣ್ಣದ ಇಂಡಿಕಾ ಕಾರಿನಿಂದ ಇಬ್ಬರು ಅಪರಿಚಿತರು ಇಳಿದು ಬಾಲಕನನ್ನು ಬಲವಂತದಿಂದ ಕಾರಿಗೆ ಹತ್ತಿಸಿಕೊಂಡಿದ್ದಾರೆ.

ಶಿವನ್ ಓಡಿ ಬಂದು‌ಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸುವ ವೇಳೆಗೆ ಕಾರನ್ನು ಚಲಾಯಿಸಿಕೊಂಡು ರಥ ಬೀದಿ ಕಡೆಗೆ ತೆರಳಿದ್ದಾರೆ. ಬಳಿಕ ಶಿವನ್ ಅವರ ಸೊಸೆಗೆ ಅಪಹರಣಕಾರರು ಪೋನ್ ಮಾಡಿ ಮಗನನ್ನು ಬಿಡಿಸಲು 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ಬೇಡಿಕೆ ಇಟ್ಟಿರುವುದಾಗಿ ಶಿವನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಳ್ತಂಗಡಿ ಎಸ್.ಐ. ನಂದಕುಮಾರ್ ನೇತೃತ್ವದಲ್ಲಿ ಅಪಹರಣಕಾರರ ಪತ್ತೆಗೆ ಬಲೆಬೀಸಲಾಗಿದ್ದು ಆರೋಪಿಗಳು ಸುಳಿವುಗಳನ್ನು ಪತ್ತೆಹಚ್ಚುವ ಕೆಲಸ ಪ್ರಾರಂಭವಾಗಿದೆ ಎನ್ನಲಾಗಿದೆ.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...