ಉಡುಪಿ: ಭಾನುವಾರ ‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಪ್ರಶಂಸೆಗೆ ಪಾತ್ರರಾದ ಉಡುಪಿ ಮೂಲದ ನವವಿವಾಹಿತರಾದ ಅನುದೀಪ್ ಹಾಗೂ ಮಿನುಶಾ ಜೋಡಿಯನ್ನು ಬಿಜೆಪಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.



ಮದುವೆಯಾಗಿ ಹನಿಮೂನ್ ಗೆ ಹೋಗುವುದನ್ನು ಬಿಟ್ಟು ಸೋಮೇಶ್ವರ ಬೀಚ್ ಸ್ವಚ್ಛಗೋಳಿಸಿದ ನವದಂಪತಿ ಬೈಂದೂರಿನ ಅನುದೀಪ್ ಹೆಗ್ಡೆ ಹಾಗೂ ಮಿನುಷಾ ಅವರು ಇವರು ಸೋಮೇಶ್ವರ ಬೀಚ್ ನಲ್ಲಿ 800 ಕೆಜಿ ಪ್ಲಾಸ್ಟಿಕ್ ಮತ್ತಿತರ ಕಸವನ್ನು ಹೆಕ್ಕಿ ಸ್ವಚ್ಚ ಭಾರತ ಅಭಿಯಾನಕ್ಕೆ ಕೈ ಜೋಡಿಸಿರುತ್ತಾರೆ.
ಈ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಎ.ಸುವರ್ಣ, ಪ್ರಮುಖರಾದ ಜಗದೀಶ್ ಅಧಕಾರಿ, ಶಿಲ್ಪಾ ಜಿ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.