Sunday, October 22, 2023

ಬಂಟ್ವಾಳ: ಮತ ಎಣಿಕೆಯ ಪೂರ್ವಭಾವಿ ತರಬೇತಿ

Must read

ಬಂಟ್ವಾಳ: ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಮತ ಎಣಿಕೆಯ ಪೂರ್ವಭಾವಿ ತರಬೇತಿ ಸೋಮವಾರ ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣ ಮತ್ತು ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಏಕಕಾಲದಲ್ಲಿ ನಡೆಯಿತು.

ಈ ಸಂದರ್ಭ ಸಹಾಯಕ ಕಮೀಷನರ್ ಮದನ್ ಮೋಹನ್, ತಹಸೀಲ್ದಾರ್ ಅನಿತಾಲಕ್ಷ್ಮೀ, ಮತ ಎಣಿಕೆಯ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ತರಬೇತಿ ಸಂಸ್ಥೆ ಪ್ರಿನ್ಸಿಪಾಲ್ ವೆಂಕಟೇಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ಕಂದಾಯ ಇಲಾಖೆಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು, ದಿವಾಕರ ಮುಗುಳ್ಯ ಉಪಸ್ಥಿತರಿದ್ದರು. ತಾಪಂ ಸಭಾಂಗಣದಲ್ಲಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳಿಗೆ ತರಬೇತಿ ನಡೆದರೆ, ಮೊಡಂಕಾಪಿನಲ್ಲಿ ಮತ ಎಣಿಕೆಯ ಮೇಲ್ವಿಚಾರಕರು, ಎಣಿಕೆ ಸಿಬ್ಬಂದಿಗೆ ತರಬೇತಿ ನಡೆಯಿತು. ತಾಪಂನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕ ಮೋಹನ್, ಮೊಡಂಕಾಪಿನಲ್ಲಿ ಸನತ್ ರಾಮ್, ಉದಯಕುಮಾರ್ ತರಬೇತಿಯನ್ನು ನೀಡಿದರು.

 

More articles

Latest article