Tuesday, October 17, 2023

ಸಿದ್ದಕಟ್ಟೆ: ಸಾಮಾಜಿಕ ಸಾಮರಸ್ಯ ದಿನ

Must read

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ, ಸಿದ್ದಕಟ್ಟೆ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಅಂಗವಾಗಿ ಸಾಮಾಜಿಕ ಸಾಮರಸ್ಯ ದಿನವನ್ನಾಗಿ ಆಚರಿಸಲಾಯಿತು.
ಸಿದ್ದಕಟ್ಟೆಯ ಅಶ್ವಿನಿ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಹಾಗೂ ಲೇಖಕ ಆಗಿರುವ ಡಾ. ಯೋಗೀಶ್ ಕೈರೊಡಿ  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಬಡತನ ಹಾಗೂ ಇತರೆ ಅಡೆತಡೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ನಾವು ಅದನ್ನೆಲ್ಲ ಮೆಟ್ಟಿ ಹೇಗೆ ಸಾಧನೆಯ ಶಿಖರವನ್ನೇರಬೇಕು ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ನೋಡಿ ಕಲಿಯಬೇಕಾಗಿದೆ. ಬಾಲ್ಯದಲ್ಲಿ ಅತ್ಯಂತ ಶೋಷಣೆಗೊಳಗಾದ ವ್ಯಕ್ತಿ ಮುಂದೆ ಸ್ವಾತಂತ್ರ್ಯ ಭಾರತದ ಕಾನೂನು ಸಚಿವರಾದದ್ದು ನಮಗೆಲ್ಲಾ ಸ್ಪೂರ್ತಿದಾಯಕ ಎಂದರು.

 
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನ ಮಂಗಳೂರು ಜಿಲ್ಲಾ ಸಂಚಾಲಕ ಹರ್ಷಿತ್ ಕೊಯಿಲ, ತಾಲೂಕು ಸಂಚಾಲಕ ದಿನೇಶ್ ಕೊಯಿಲ, ನಗರ ಕಾರ್ಯದರ್ಶಿ ಗುರುಪ್ರಸಾದ್, ನಗರ ಸಹಕಾರ್ಯದರ್ಶಿ ಶಿವಕುಮಾರ್, ಕಾರ್ಯಕರ್ತರಾದ ಕಿರಣ್, ಪ್ರಜ್ವಲ್, ನಿಶಾ, ಜಯಲಕ್ಷ್ಮಿ, ವಿಕ್ಷೀತಾ, ಅನುಶಾ, ಅಶ್ವಿತಾ, ಕೊಮಲಾಕ್ಷಿ, ಸುಕನ್ಯಾ, ಅಶ್ವಿನಿ, ಸೂರಾಜ್, ಉಜ್ವಲ್, ಸುಶಾಂತ್, ದೀಪಕ್, ಪ್ರದೀಪ್, ಅಪೂರ್ವ, ಹರ್ಷಿತಾ, ದೀಕ್ಷಿತ್, ಸುದರ್ಶನ್ ಉಪಸ್ಥಿತರಿದ್ದರು.

More articles

Latest article