ಬಂಟ್ವಾಳ: ಶಂಭುಗ ಬಾಲಮಂಟಮೆಯಲ್ಲಿ ಗುಡ್ಡೆಚಾಮುಂಡಿ , ಪಂಜುರ್ಲಿ, ಮಲೆಕೊರತಿ ದೈವಗಳ ವಾರ್ಷಿಕ ನೇಮ ನಡೆಯಿತು.
ಕಟ್ಟು ಕಟ್ಟಲೆಯಂತೆ ಡಿ.18 ರಂದು ಬಾಳೆ ಗೊನೆ ಕಡಿದು ಬಳಿಕ ಡಿ.25 ರಂದು ಬೆಳಿಗ್ಗೆ ಮಾಣಿ ಗುತ್ತುವಿನಿಂದ ದೈವದ ಭಂಡಾರ ಬಂದು ಮಧ್ಯಾಹ್ನ ಪ್ರತಿಷ್ಟಾ ದಿನಾಚರಣೆ ಪ್ರಯುಕ್ತ ದೈವಗಳಿಗೆ ತಂಬಿಲ ಸೇವೆ ನಡೆಯಿತು.
ಸಂಜೆ ಯ ವೇಳೆ ಧಾರ್ಮಿಕ ವೈದಿಕ ವಿಧಿವಿದಾನಗಳ ಬಳಿಕ ದೈವಗಳಿಗೆ ವಾರ್ಷಿಕ ನೇಮ ಜರುಗಿತು.