Saturday, April 6, 2024

ಆರ್.ಎನ್. ಶೆಟ್ಟಿಯವರ ನಿಧನಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರ ಸಂತಾಪ

ಆರ್.ಎನ್. ಶೆಟ್ಟಿಯವರ ನಿಧನದ ವಾರ್ತೆಯನ್ನು ತಿಳಿದು ವಿಷಾದವಾಯಿತು. ಅವರು ನಾನು ಮೆಚ್ಚಿದ ವ್ಯಕ್ತಿ. ಸಂಪಾದನೆ ಎರಡು ಕೈಯಲ್ಲಿ ಮಾಡಿ ನಾಲ್ಕು ಕೈಯಲ್ಲಿ ದಾನ ಮಾಡು ಎಂಬ ಮಾತಿನನ್ವಯದಂತೆ ಶೈಕ್ಷಣಿಕವಾಗಿ ಯಾವುದೇ ಪದವಿ ಪಡೆಯದಿದ್ದರೂ ಪ್ರಸಿದ್ಧರಾದ ಅವರು ಆಡಳಿತ ತರಬೇತಿದಾರರಿಗೆ ಶಿಕ್ಷಣ ಕೊಡುವಷ್ಟು ತಜ್ಞರಾಗಿದ್ದರು. ಅಂತೆಯೇ ಮುರ್ಡೇಶ್ವರ ಕ್ಷೇತ್ರವನ್ನು ಏಕಾಗ್ರತೆಯಿಂದ ಅಭಿವೃದ್ಧಿ ಪಡಿಸಿ ಎಲ್ಲರೂ ಒಮ್ಮೆ ವೀಕ್ಷಿಸಲೇ ಬೇಕಾದ ಪವಿತ್ರ ಕ್ಷೇತ್ರವಾಗಿ ಪರಿವರ್ತಿಸಿದರು.
ವ್ಯವಹಾರ, ಧಾರ್ಮಿಕತೆ ಎಲ್ಲಾ ರಂಗದಲ್ಲಿಯೂ ಯಶಸ್ಸು ಪಡೆದು ಮಾದರಿ ಅನ್ನಿಸಿಕೊಂಡಿದ್ದರು. ದಾನದಲ್ಲಿಯೂ ಎತ್ತಿದ ಕೈ. ಆದರೆ ಹೆಚ್ಚು ಪ್ರಚಾರ ಬಯಸದೆ ದಾನವನ್ನು ಮಾಡಿ ತಾನು ದಾನ ನೀಡಿದ ಕಾರ್ಯಗಳು ಅಥವಾ ಕಟ್ಟಡಗಳು ವ್ಯವಸ್ಥಿತವಾಗಿ ರೂಪುಗೊಂಡು ನಡೆಸುವಂತೆ ಮಾರ್ಗದರ್ಶನ ನೀಡುತ್ತಿದ್ದರು. ಆದರ್ಶ ಜೀವನವನ್ನು ನಡೆಸಿದ ಶ್ರೀ ಶೆಟ್ಟಿಯವರ ಜೀವನ ಇತರರಿಗೆ ಮಾದರಿ ಆಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.
ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಮುರ್ಡೇಶ್ವರ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

(ಡಿ. ವೀರೇಂದ್ರ ಹೆಗ್ಗಡೆಯವರು)

 

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...

ಸಾವು ಗೆದ್ದು ಬಂದ ಸಾತ್ವಿಕ್ ; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...