Friday, October 27, 2023

ಪೊಳಲಿ: ದೃಢಕಲಶ ಪೂರ್ವತಯಾರಿಯ ಬಗ್ಗೆ ಆಡಳಿತ ಸಮಿತಿಯ ಸಭೆ

Must read

ಬಂಟ್ವಾಳ: 2021ರ ಫೆಬ್ರವರಿ 17ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಲಿರುವ ದೃಢಕಲಶದ ಪೂರ್ವತಯಾರಿಯ ಬಗ್ಗೆ ಕ್ಷೇತ್ರದ ಆಡಳಿತ ಸಮಿತಿಯ ಸಭೆ ಸಂಸದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ದೇಗುಲದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇಗುದ ಅನುವಂಶೀಯ ಮೋಕ್ತೇಸರರು, ತಂತ್ರಿವರ್ಗದವರು ಉಪಸ್ಥಿತರಿದ್ದರು.

ಪೊಳಲಿಯಲ್ಲಿ ನಡೆದ ಬ್ರಹ್ಮಕಳಶೋತ್ಸವದ ನಂತರ ದೇವಾಲಯದ ಸಾನಿಧ್ಯದಲ್ಲಿ ಕೆಲವೊಂದು ಸಣ್ಣಪುಟ್ಟ ಕೆಲಸಗಳು ನಡೆಯಲಿರುವುದರಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಡಿ.28 ರಿಂದ ಫೆ. 17ರವರೆಗೆ  ದೇವರ ದರ್ಶನವಿರುವುದಿಲ್ಲ.

More articles

Latest article