Wednesday, October 18, 2023

ನರೇಂದ್ರ ಮೋದಿ ಮನ್ ಕೀ ಬಾತ್; ಮೋದಿ ಭಾಷಣದ ಮುಖ್ಯಾಂಶಗಳು

Must read

ಭಾನುವಾರ ಪ್ರಧಾನಿ ಮೋದಿ ‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 2020ನೇ ವರ್ಷದ ಕೊನೆಯ ಕಾರ್ಯಕ್ರಮ ಇದಾಗಿದೆ.

ಮೋದಿ ಭಾಷಣದ ಮುಖ್ಯಾಂಶಗಳು:

*2020ರಲ್ಲಿ ಏನೇನೂ ಆಗಿದೆ. ಯಾರೂ ಸಹ ಊಹಿಸಿದ ಹಲವು ಘಟನೆಗಳು ನಡೆದಿವೆ. ಕೋವಿಡ್ ಕಾರಣದಿಂದಾಗಿ ನಾವು ಉತ್ಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇವೆ.

* ವೆಂಕಟ ಮುರಳಿ ಪ್ರಸಾದ್ ಅವರು ವಿಶಾಖಪಟ್ಟಣಂನಿಂದ ಪತ್ರ ಬರೆದಿದ್ದಾರೆ. 2021ರಲ್ಲಿ ಆತ್ಮ ನಿರ್ಭರ್ ಭಾರತ್ ಮೂಲಕ ಖರೀದಿ ಮಾಡುವ ಚಾರ್ಟ್‌ ಅನ್ನು ಪತ್ರದೊಂದಿಗೆ ಲಗತ್ತಿಸಿದ್ದಾರೆ. ಎಬಿಸಿ ಎಂದರೆ ಅರ್ಥ ಮಾಡಿಕೊಳ್ಳಲು ಕೆಲವು ಸಮಯ ನನಗೆ ಬೇಕಾಯಿತು. ಪ್ರತಿದಿನ ನಾವು ಬಳಕೆ ಮಾಡುವ ಹಲವಾರು ವಸ್ತುಗಳನ್ನು ಅವರು ಪಟ್ಟಿ ಮಾಡಿದ್ದಾರೆ. ನಮ್ಮ ದೇಶದಲ್ಲಿಯೇ ತಯಾರಾಗುವ ಹಲವಾರು ವಸ್ತುಗಳನ್ನು ನಾವು ಪ್ರತಿದಿನ ಬಳಕೆ ಮಾಡಬಹುದು.

* ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಕೋವಿಡ್ ನಡುವೆಯೇ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಿ ಎಂಬ ಕೂಗು ಹೆಚ್ಚಾಗುತ್ತಿದೆ. ಅತಿ ಕಡಿಮೆ ಅವಧಿಯಲ್ಲಿ ಜನರ ಆಲೋಚನಾ ಶಕ್ತಿ ಎಷ್ಟು ಬದಲಾಗಿದೆ ನೋಡಿ.

* ನೀವು ಒಂದು ಪಟ್ಟಿ ಮಾಡಿ ಎಂದು ಜನರಲ್ಲಿ ನಾನು ಮನವಿ ಮಾಡುವೆ. ಈ ಪಟ್ಟಿಯಲ್ಲಿ ನಾವು ಎಷ್ಟು ವಿದೇಶಿ ವಸ್ತುಗಳನ್ನು ಬಳಕೆ ಮಾಡುತ್ತೇವೆ ಎಂಬುದನ್ನು ತಿಳಿಯಿರಿ. ದೇಶದಕ್ಕಾಗಿ ನಾವು ಹೊಸ ವರ್ಷದಲ್ಲಿ ಹೊಸ ನಿರ್ಣಯ ಕೈಗೊಳ್ಳೋಣ.

* ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡುತ್ತೇವೆ ಎಂದು ಹೊಸ ವರ್ಷದಲ್ಲಿ ಸಂಕಲ್ಪ ಮಾಡಿ. ಸ್ವದೇಶಿ ವಸ್ತುಗಳಲ್ಲಿ ನಮ್ಮ ದೇಶದ ಜನರ ಬೆವರಿನ ಶ್ರಮ ಅಡಗಿದೆ. ನಿಮ್ಮ ಸಂಕಲ್ಪ ನಮ್ಮ ದೇಶದ ಜನರಿಗೆ ಸಹಾಯಕವಾಗಲಿದೆ ಎಂಬುದನ್ನು ಮರೆಯುವಂತಿಲ್ಲ.

* ಭಾರತದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಜಿಮ್ ಕಾರ್ಬೆಟ್ ಚಿರತೆಗಳ ಬಗ್ಗೆ ಹೇಳಿದ್ದರು. ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ.

* ಕರ್ನಾಟಕದಿಂದ ಬಂದಿರುವ ಪತ್ರವನ್ನು ಓದಿದ ಮೋದಿ. ಶ್ರೀರಂಗಪಟ್ಟಣದ ಸಮೀಪದ ಮಂದಿರವನ್ನು ಯವ ಬ್ರಿಗೇಡ್ ಸ್ವಚ್ಛಗೊಳಿಸಿದ ಕಾರ್ಯವನ್ನು ಶ್ಲಾಘಿಸಿದರು. ವಾರಾಂತ್ಯದ ಬಿಡುವಿನ ಸಮಯದಲ್ಲಿ ಇದನ್ನು ಅವರು ಮಾಡಿದ್ದಾರೆ ಎಂದು ಮೋದಿ ಹೇಳಿದರು.

* ಭಾರತದಲ್ಲಿನ ಯುವಕರನ್ನು ನೋಡಿದಾಗ ನನಗೆ ಆನಂದ ಆಗುತ್ತದೆ. ಕ್ಯಾನ್ ಡು, ವಿಲ್ ಡು ಎಂಬ ಎರಡು ಬಲವಾದ ನಂಬಿಕೆಗಳಿವೆ. ಅವರು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾರೆ.

* ಕೋವಿಡ್ ಸಂದರ್ಭದಲ್ಲಿ ನಾವು ಶಿಕ್ಷಕರ ತ್ಯಾಗಗಳ ಬಗ್ಗೆ ಮಾತನಾಡಬೇಕು. ಅವರು ಮಕ್ಕಳಿಗೆ ಪಾಠಗಳನ್ನು ಅರ್ಥ ಮಾಡಿಸಲು ವಿವಿಧ ಪ್ರಯತ್ನಗಳನ್ನು ಮಾಡಿದ್ದಾರೆ. ವಿವಿಧ ರೀತಿಯಲ್ಲಿ ಪಠ್ಯಗಳನ್ನು ಅರ್ಥ ಮಾಡಿಸಲು ಪ್ರಯೋಗಗಳನ್ನು ಮಾಡಿದ್ದಾರೆ.

More articles

Latest article