Wednesday, April 10, 2024

ರಮಾನಾಥ ರೈ ಮಲತಾಯಿ ಧೋರಣೆ ನೀತಿಯಿಂದ ಬೇಸೆತ್ತು ಬಿಜೆಪಿ ಸೇರಿದ್ದೇನೆ: ಮಾದವ ಮಾವೆ.

ಬಂಟ್ವಾಳ: ರಮನಾಥ ರೈ ಅವರಿಗೆ ತಾಯಿ ಸ್ಥಾನ ನೀಡಿದ್ದೇ ಆದರೆ ಅವರ ಮಲತಾಯಿ ಧೋರಣೆ ನೀತಿಯಿಂದ ಬೇಸೆತ್ತು ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದ್ದೇನೆ ಎಂದು ಬಿಜೆಪಿಗೆ ಸೇರ್ಪಡೆ ಗೊಂಡ ಮಾದವ ಮಾವೆ ಹೇಳಿದ್ದಾರೆ.


ರಾಜಕೀಯ ವಾಗಿ ಕಳೆದ 15 ವರ್ಷಗಳಿಂದ ರೈ ಜೊತೆಗಿದ್ದೇನೆ. ನಾಗರಾಜ ಶೆಟ್ಟಿಯವರ ಎದುರು ಸೋತಿದ್ದ ಸಂದರ್ಭ ರಮಾನಾಥ ರೈ ಪರಿಚಯ ಆಗಿದ್ದು, ಬಳಿಕ ಅನೇಕ ಜವಬ್ದಾರಿಗಳನ್ನು ನನಗೆ ನೀಡಿದರು. ರೈ ಯವರ ಜೊತೆ ಹೆಚ್ಚು ಆತ್ಮೀಯತೆಯಿಂದ ಇದ್ದೆವು, ನಂತರದ ಚುನಾವಣೆಯಲ್ಲಿ ರಮಾನಾಥವರೈ ಗೆಲುವಿಗಾಗಿ ನಾವೂ ಶ್ರಮಿಸಿದ್ದೇನೆ ಎಂದರು. ರೈ ಯವರಿಗೆ ನಾನು ತಾಯಿಯ ಸ್ಥಾನ ನೀಡಿದ್ದೇನೆ. ಕೊಳ್ನಾಡು ಕ್ಷೇತ್ರದ ಜಿ.ಪಂ.ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಾಗಿದ್ದೆ, ಆದರೆ ವೀರಕಂಭ ತಾ.ಪಂ.ಕ್ಷೇತ್ರಕ್ಕೆ ಅವಕಾಶ ಕೊಟ್ಟರು. ಶಿಸ್ತಿನ ಸಿಪಾಯಿಯಂತೆ ಪಕ್ಷದ ಗೆಲುವಿಗೆ ದುಡಿದಿದ್ದೇನೆ. ಎಲ್ಲೂ ಅಧಿಕಾರದ ಅಪೇಕ್ಷೆ ಇರಲಿಲ್ಲ, ಪತ್ನಿ ಮಂಜುಳಾ ಮಾಧವ ಮಾವೆಗೂ ಅವಕಾಶ ಒದಗಿ ಬಂತು. ಜಿ.ಪಂ. ಚುನಾವಣೆಯಲ್ಲಿ ಕೊಳ್ನಾಡಿನಲ್ಲಿ‌ಅವಕಾಶ ನೀಡದೆ, ಮಾಣಿ‌ ಜಿ.ಪಂ.ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ತಂದಿದ್ದರು. ಒತ್ತಡದ ಹಿನ್ನೆಲೆಯಲ್ಲು ಮಂಜುಳಾ ಮಾಧವ ಮಾವೆಗೆ ಅವಕಾಶ ಕೊಟ್ಟರು. ರೈ ಆಕಾಶದಷ್ಟು ಎತ್ತರದಲ್ಲಿದ್ದಾರೆ, ಅವರ ಬಗ್ಗೆ ತಪ್ಪು ಮಾತನಾಡುವುದಿಲ್ಲ. ಆಗಿನಿಂದಲೇ ಮಾಧವ ಮಾವೆಯನ್ನು ತುಳಿಯುವ ಕೆಲಸ ಕಾಂಗ್ರೇಸ್ ಪಕ್ಷ ಮಾಡಿತ್ತು ಎಂದು ಮಾವೆ ಹೇಳಿದರು. ನಾನು ವಲಸಿಗನಲ್ಲ, ಪಕ್ಷ ದ್ರೋಹದ ಕೆಲಸ ಮಾಡಿರಲಿಲ್ಲ, ತುಳಿತದಿಂದ ಬೇಸತ್ತು ಪಕ್ಷ ಬಿಟ್ಟಿದ್ದೇನೆ.

ಮೀಸಲಾತಿ ಹಿನ್ನೆಲೆಯಲ್ಲಿ ಜಿ.ಪಂ.ಸದಸ್ಯರಾದ ಮಂಜುಳಾ ಮಾವೆಗೆಮಾಣಿ‌ ಜಿ.ಪಂ.ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿದ್ದಾರೆ.ಪಕ್ಷದ ವಿಚಾರಕ್ಕೆ ಸಂಬಂಧಿಸಿ ಅವರ ಬಳಿ ಮಾತುಕತೆ ನಡೆಸಿದ್ದೇನೆಯೇ ಹೊರತು,ನನ್ನ ಖಾಸಗಿ ಉದ್ಯಮ ವ್ಯವಹಾರಕ್ಕೆ ಸಂಬಂಧಿಸಿ ರಮಾನಾಥ ರೈ ಯವರಿಂದ ಸಹಾಯ ಪಡೆದಿದ್ದರೆ, ಅವರು ಹೇಳಿದಂತೆ ಕೇಳುತ್ತೇನೆ , ರಾಜಕೀಯ ನಿವೃತ್ತಿಗೂ ಸಿದ್ದ ಎಂದು ಅವರು ಈ‌ಸಂದರ್ಭದಲ್ಲಿ ಹೇಳಿದರು.

, ನನ್ನನ್ನು ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಮಾಡುತ್ತೇನೆಂದು ತಿಳಿಸಿದ ರೈ, ವರ್ಷ ಕಳೆದರೂ ಅಧ್ಯಕ್ಷರಾಗಿ ಮಾಡಲಿಲ್ಲ. ಖಾದರ್ ಮುತುವರ್ಜಿಯಲ್ಲಿ‌ ಅವಕಾಶ ಸಿಕ್ಕಿತ್ತಾದರೂ, ರೈ ಯವರಿಂದಾಗಿ ಅಧಿಕಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆ ಬಳಿಕದಿಂದ ನಾನು ಪಕ್ಷದ ಸಕ್ರೀಯ ರಾಜಕಾರಣದಿಂದ ಹಿಂದುಳಿದಿದ್ದೇನೆ. ಬಂಟ್ವಾಳ‌ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿ.ಪಂ.ಸ್ಥಾನಕ್ಕೆ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿ ಅಗತ್ಯವೇ ಎಂದವರು ಪ್ರಶ್ನಿಸಿದರು.
ವೈಯುಕ್ತಿಕ ಗೌರವಕ್ಕೆ ಧಕ್ಕೆ ಬಂದಾಗ ಮನೆ ಮಕ್ಕಳು ಹೊರ ಬಂದ ಹಾಗೆ, ನಾನು ಕಾಂಗ್ರೇಸ್ ಪಕ್ಷದ ಮನೆಯಿಂದ ಹೊರಬಂದಿದ್ದೇನೆ. ಸಮಾಜ ಸೇವೆ ಮಾಡಲೆಂದು ಬಂದಿದ್ದೇನೆ.
ಶಾಸಕ ರಾಜೇಶ್ ನಾಯ್ಕ್ ರವರ ರಾಜ ಧರ್ಮ ದ ಆಡಳಿತಕ್ಕೆ ಬೆಂಬಲ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದರು. ಮುಂದಿನ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ರನ್ನು 25-30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಹಗಲು ರಾತ್ರಿ ದುಡಿಯುವುದು ನನ್ನ ಅಜೆಂಡಾ ಎಂದರು.

ಡಿ.18 ಭಾರತೀಯ ಜನತಾ ಪಾರ್ಟಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದೇನೆ. ಪಕ್ಷದ ವಿವಿಧ ಜವಬ್ದಾರಿ ಗಳನ್ನು ನಿರ್ವಹಿಸಿದ್ದೇನೆ.ಎಂದು ಮಾಧವ ಮಾವೆ ಹೇಳಿದರು. ಇದೇ ಸಂದರ್ಭ ಹಿರಿಯ ಕಾಂಗ್ರೇಸಿಗ ಬಾಲಕೃಷ್ಣ ಶೆಟ್ಟಿ ಬಿಜೆಪಿ ಸೇರ್ಪಡೆಗೊಂಡರು.

ಶಾಸಕ ರಾಜೇಶ್ ನಾಯ್ಕ್ , ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ , ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾಧವ ಮಾವೆ, ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಡೊಂಬಯ್ಯ ಅರಳ, ಕೇಶವ ದೈಪಿಲ, ರೊನಾಲ್ಡ್ ಡಿಸೋಜ, ವಸಂತ ಅಣ್ಣಳಿಕೆ, ಸುದರ್ಶನ್ ಬಜ, ಡಿ.ಕೆ.ಹಂಝ ಮೊದಲಾದವರು ಉಪಸ್ಥಿತರಿದ್ದರು.

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...