Friday, April 5, 2024

ಬೀದಿ ಬದಿ ಮಹಿಳಾ ವ್ಯಾಪಾರಿಗೆ ಅನ್ಯಾಯ : ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ ವಿಡಿಯೋ ಪುಲ್ ವೈರಲ್

ಬಂಟ್ವಾಳ : ಬೀದಿ ಬದಿ ಮಹಿಳಾ ವ್ಯಾಪಾರಿ ಒಬ್ಬಳಿಗೆ ಅನ್ಯಾಯವಾಗುತ್ತಿದ್ದು ನ್ಯಾಯ ಒದಗಿಸಿ ಕೊಡುವಂತೆ ಮೋದಿ ವರಗೆ ಶೇರ್ ಮಾಡಿ ಎಂದು ಮನವಿ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲಜಾಣದಲ್ಲಿ ವೈರಲ್ ಆಗಿದೆ.
ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಂಜಾಲಕಟ್ಟೆ ನಿವಾಸಿ ವಿಜಯ ಎಂಬವರು ಈ ವಿಡಿಯೋ ಮಾಡಿ ಶೇರ್ ಮಾಡಿದ್ದು ಇದೀಗ ಪುಲ್ ವೈರಲ್ ಆಗಿದೆ.

*ಘಟನೆ ಏನು ? ಇಲ್ಲಿದೆ ನೋಡಿ ಅವರ ಮಾತು!*

ಸರಕಾರಿ ಆಸ್ಪತ್ರೆಯ ಅವರಣಗೋಡೆಯ ಹೊರಗಡೆ ಬೀದಿ ಬದಿಯಲ್ಲಿ ತಳ್ಳುಗಾಡಿಯೊಂದನ್ನು ಇಟ್ಟು ತರಕಾರಿ ಹಾಗೂ ರೆಡಿ ಜ್ಯೂಸ್ ಮಾರಟಮಾಡುತ್ತಿದ್ದರು.
ಆದರೆ ಇದು ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆ ಯ ಅವರಣಗೋಡೆಯ ಹೊರಗಡೆ ಇರುವುದರಿಂದ ಇದು ಆಸ್ಪತ್ರೆಗೆ ಸೇರಿದ ಜಾಗ ಎಂಬುದು ಸರಕಾರಿ ವೈದ್ಯರ ಆರೋಪ.
ಈ ನಿಟ್ಟಿನಲ್ಲಿ ಸರಕಾರಿ ವೈದ್ಯರು ಮಹಿಳೆಯರು ಇಟ್ಟಿರುವ ತಳ್ಳುಗಾಡಿಯನ್ನು ಸೇರಿಸಿ ತಂತಿ ಬೇಲಿ ಅಳವಡಿಸಿದ್ದಾರೆ.
ಹಾಗಾಗಿ ಮಹಿಳೆಗೆ ವ್ಯಾಪಾರ ವಹಿವಾಟು ನಡೆಸಲು ಅಸಾಧ್ಯವಾಗುತ್ತಿದೆ ಎಂದು ಮಹಿಳೆ ಆರೋಪ.
ಮೋದಿಯವರು ಬೀದಿ ಬದಿ ವ್ಯಾಪಾರ ಮಾಡಲು ಅನುಮತಿ ನೀಡಲು ಸೂಚಿಸಿದ್ದರು ಇವರು ಯಾಕೆ ನಮಗೆ ಅನ್ಯಾಯಮಾಡುತ್ತಿದ್ದಾರೆ ಎಂಬುದು ಇವರ ಆರೋಪ.
ರಾಷ್ಟ್ರೀಯ ಹೆದ್ದಾರಿ ಯ ಉದ್ದಕ್ಕೂ ನಾಯಿಕೊಡೆಯಂತೆ ಬೀದಿಬದಿ ಅಂಗಡಿಗಳು ತಲೆ ಎತ್ತುತ್ತಿದ್ದರು ನನಗೆ ಮಾತ್ರ ಯಾಕೆ ಇವರ ವಿರೋಧ ಎಂಬುದು ಇವರ ಮಾತು.
ಒಟ್ಟಾರೆಯಾಗಿ ನನಗೆ ಪುಂಜಾಲಕಟ್ಟೆ ಸರಕಾರಿ ವೈದ್ಯರಿಂದ ಅನ್ಯಾಯವಾಗುತ್ತಿದೆ ನ್ಯಾಯ ಒದಗಿಸಿ ಕೊಡಿ ಎಂಬ ವಿಡಿಯೋ ಇಲ್ಲಿದೆ ನೋಡಿ!

 

ಡಾ! ಸತೀಶ್
ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ :

  • ಸರಕಾರಿ ಆಸ್ಪತ್ರೆಗೆ ಸೇರಿದ ಈ ಜಮೀನು ಆಗಿದ್ದರಿಂದ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ಮಾಡಿದ ಬಳಿಕ ಬೇಲಿ ಹಾಕಲಾಗಿದೆ.
    ಈ ಹಿಂದಯೇ ಜಮೀನಿನ ಸರ್ವೇ ಮಾಡಿಸಿ ಗುರುತು ಕಲ್ಲು ಹಾಕಲಾಗಿತ್ತು. ಆದರೆ ಬಿಸಿರೋಡು ಪುಂಜಲಾಕಟ್ಟೆವೆರೆಗಿನ ರಸ್ತೆ ಅಗಲೀಕರಣ ಕಾಮಗಾರಿಯ ವೇಳೆ ರಸ್ತೆಯ ಬದಿಯಲ್ಲಿ ದ್ದ ಸರ್ವೇ ಕಲ್ಲು ಹೋಗಿದೆ ಹಾಗಾಗಿ ಎಲ್ಲಾ ಕೆಲಸಗಳು ಮುಗಿದ ಬಳಿಕ ಮತ್ತೆ ಬೇಲಿ ಹಾಕುವ ಯೋಜನೆ ಇತ್ತು ಆದರೆ ಆ ಮಧ್ಯೆ ಆಸ್ಪತ್ರೆ ಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗೂಡಂಗಡಿ ಬಿದ್ದಿದೆ, ಮತ್ತೆ ಅನೇಕ ರು ಗೂಡಂಗಡಿ ಹಾಕುವ ಒತ್ತಡಗಳು ಬಂದವು ಆ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಬೇಲಿ ಹಾಕಲಾಗಿದೆ.
    ಮತ್ತೆ ವಿವಾದಗಳು ಹುಟ್ಟಿಕೊಂಡಿವೆ ಹಾಗಾಗಿ ಮೇಲಾಧಿಕಾರಿಗಳ ಆದೇಶದಂತೆ ಬೇಲಿ ತೆಗೆಸುವ ವ್ಯವಸ್ಥೆ ಮಾಡಲಾಗುತ್ತದೆ.

ಲೋಕೋಪಯೋಗಿ ಇಲಾಖೆ ಪತ್ರದಲ್ಲಿ ಏನಿದೆ?

  • ರಸ್ತೆ ಅಗಲೀಕರಣ ಮತ್ತು ರಸ್ತೆ ಅಪಘಾತಕ್ಕೆ ಕಾರಣವಾಗುವ ರಸ್ತೆ ಬದಿಯ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸುವಂತೆಯೂ ಲೋಕೋಪಯೋಗಿ ಇಲಾಖೆ ಸಂಬಂಧಿಸಿದವರಿಗೆ ಪತ್ರ ಕೂಡ ಬರೆದಿದೆ.
    ಆದರೂ ಮತ್ತೆ ಮತ್ತೆ ರಸ್ತೆ ಬದಿಯ ವ್ಯಾಪರಿಗಳಿಗೆ ಸಂಬಂಧಿಸಿದ ಇಲಾಖೆಗಳು ಯಾಕೆ ಅವಕಾಶ ನೀಡುತ್ತಾರೆ.
    ಬೀದಿ ಬದಿಯ ಅಂಗಡಿಗೆ ಬರುವ ಗ್ರಾಹಕರು ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ ಅನೇಕ ಅಪಘಾತ ಸಂಭವಿಸಿ ಪ್ರಾಣಹಾನಿಯಾದ ಘಟನೆಗಳು ಉಂಟಾಗಿವೆ ಈ ಬಗ್ಗೆ ಯಾಕೆ ಇಲಾಖೆ ಸೂಕ್ತವಾದ ಕಾನೂನು ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಇದೆ.

 

More from the blog

ಸಾವು ಗೆದ್ದು ಬಂದ ಸಾತ್ವಿಕ್ ; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಬುಧವಾರ ನಾಮಪತ್ರ ಸಲ್ಲಿಸಿದರು. ಇನ್ನು ಕೋಟ ಶ್ರೀನಿವಾಸ್ ಪೂಜಾರಿ ಅವರು ನಾಮಪತ್ರ ಸಲ್ಲಿಸುವ ಮುನ್ನ ಪಕ್ಷದ ಕಾರ್ಯಕರ್ತರ ಬೃಹತ್‌ ಸಮಾವೇಶ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...