Tuesday, October 31, 2023

*ಭಾವಯಾನ*

Must read

ಭಾವ ಬಸುರಾಗಿ, ಬಸುರು ಪದವಾಗಿ
ನವಿರು ಕಾವ್ಯವಾಗಿದೆ
ನನ್ನೆದೆಯ ಸವಿಭಾವ ಹಾಲ್ಜೇನ ಕಡಲಾಗಿ
ಉಕ್ಕಿ ಚೆಲುವಲಿ ಹರಿಯುತಿದೆ !!

ನನ್ನೊಡಲ ಮಗುವದು ,ಬಿಗಿದಪ್ಪಿಕೊಳ್ಳುವೆ
ಎಂತಾ ಸವಿಸ್ಪರ್ಶವದು ನೋಡಾ!
ಚೆಲುವಿನ ಖಣಿಯಾಗಿ,ಒಲವಿನ ಗುರುತಾಗಿ
ಪಡಿಯಚ್ಚು ಒತ್ತಿಹುದು ನೋಡಾ!!

ಕಾಲಿಂದ ಶಿರವರೆಗೂ ನೇವರಿಸಲು
ಎಲ್ಲೂ ದೊರಕದ ಸವಿಭಾವವು!
ಕಣ್ತುಂಬಿಕೊಳ್ಳಲು ಹಿತವಾಗಿ ನಗುವುದು
ನನ್ನೆದೆಯ ಹಾಡು ಕೇಳಾ!!

ಬಿಡದ ಈ ಬಂಧವು ನೂರು ಜನುಮವದು ಎನ್ನುತಿದೆ
ಮತ್ತೆ ಮತ್ತೆ ಮಮತೆ ಹೊಳೆ ಹರಿದಿದೆ..
ತಾಯಿ ಮಗುವಿನ ಬಂಧ ಬಿಡದ ಸಂಬಂಧವು
ನೂರಾರು ಜನುಮಕೂ ನನ್ನ ಮನ ಕಾದಿದೆ!!

*ಪ್ರಮೀಳಾ ರಾಜ್*

More articles

Latest article