Saturday, April 6, 2024

ಫೆಬ್ರವರಿ 11 ರಿಂದ 25: ಕರಾವಳಿ ಕಲೋತ್ಸವ 2021

ಬಂಟ್ವಾಳ: ಕರಾವಳಿ ಕಲೋತ್ಸವ 2021 ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಇದರ ವರ್ಷದ ಕಲಾ ಯೋಜನೆಯ ಬಗ್ಗೆ ಈ ವರ್ಷ ಹಮ್ಮಿಕೊಂಡ ನವ ಯೋಚನೆಯ ನವ ಚಿಂತನೆಯ “ಕೃಷಿ ಮೇಳ”ದ ಬಗ್ಗೆ ಚಿಂತನ ಮಂಥನ ಇಂದು ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಫೆಬ್ರವರಿ 11 ರಿಂದ 25 ರ ತನಕ ಕೃಷಿ ಮೇಳ, ತುಳು ನಾಟಕ ಸ್ಪರ್ಧೆ, ಚೆಂಡೆ, ಧಪ್, ಡ್ಯಾನ್ಸ್ ಸ್ಪರ್ಧೆ, ಅಮ್ಯೂಸ್ಮೆಂಟ್, ಇತರ ಸ್ಟಾಲ್ ಗಳ ವರ್ಣಾತಿತ ಕಾರ್ಯಕ್ರಮಗಳು ಬಿ.ಸಿ.ರೋಡಿನ “ಗೋಲ್ಡನ್ ಪಾರ್ಕ್ ಮೈದಾನ” ದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.
ಮೊದಲ ಮೂರು ದಿನ ಆಕರ್ಷಕ, ಕೃಷಿ ಅನಭವದಲ್ಲಿ ಯವಕರಿಗೆ, ಮಹಿಳೆಯರಿಗೆ, ಜನತೆಗೆ ಕೃಷಿ ಮಾಹಿತಿ ನೀಡುವ ವಿಚಾರಗೋಷ್ಠಿ, ಅನುಭವ, ಸ್ಪರ್ಧೆ, ಮೂಲಕ “ವನಸಿರಿ” “ಬನಸಿರಿ” “ಕೃಷಿಸಿರಿ” “ತಾಂತ್ರಿಕ ಸಿರಿ” ಮೂಲಕ ಕೃಷಿ ವಿಚಾರ ತಿಳಿಸುವ ಬಗ್ಗೆ ಕಾರ್ಯಕ್ರಮಕ್ಕಾಗಿ ಸದಾನಂದ ಶೆಟ್ಟಿ ಸೊರ್ನಾಡು ಇವರನ್ನು ಪ್ರಧಾನ ಸಂಚಾಲಕರಾಗಿ ನೇಮಿಸಲಾಯಿತು. ಅವರಿಗೆ ಜವಾಬ್ದಾರಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಸುದರ್ಶನ್ ಜೈನ್, ಸಂಚಾಲಕ ಮೊಹನದಾಸ್ ಕೊಟ್ಟಾರಿ ಮುನ್ನೂರು, ಗೌರವ ಸಲಹೆಗಾರರಾದ ಅಶೊಕ್ ಶೆಟ್ಟಿ ಸರಪಾಡಿ, ಜಯಾನಂದ ಪೆರಾಜೆ, ಸೇಷಪ್ಪ ಮಾಸ್ಟರ್, ದಿನೇಶ್ ಶೆಟ್ಟಿ ಪಂಜಿಕಲ್ಲು, ಎಚ್ಕೆ ನಯನಾಡು, ರತ್ನ ದೇವ್ ಪುಂಜಾಲಕಟ್ಟೆ, ಜೆನಿತ್ ಜೈನ್, ಮಹಮ್ಮದ್ ನಂದಾವರ, ಆಶ್ಲೇಷ್ ಪೋಲೀಸ್ ಲೈನ್ ಉಪಸ್ಥಿತಿಯಿದ್ದರು.

ಸಮಿತಿಯ ಸೌಮ್ಯ ಯಶವಂತ್ ಭಂಡಾರಿಬೆಟ್ಟು ಸ್ವಾಗತಿಸಿ, ವಂದಿಸಿದರು.

More from the blog

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...

ಮತದಾನ ಜಾಗೃತಿ ಅಂಗವಾಗಿ ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ

ಮತದಾರರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಎ‌.5ರಂದು ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ...