Monday, April 22, 2024

ಎರಡು ಗಂಟೆಗಳ ಕಾಲ ಲಿಫ್ಟ್ ನೊಳಗೆ ಬಾಕಿಯಾಗಿದ್ದ ಬಾಲಕಿಯರು.

ಬಂಟ್ವಾಳ: ವಸತಿ ಸಮುಚ್ಚಯ ವೊಂದರಿಂದ ದಿನಪಯೋಗಿ ವಸ್ತು ಗಳನ್ನು ಖರೀದಿ ಮಾಡಲೆಂದು ಲಿಫ್ಟ್ ಮೂಲಕ ಕೆಳಗೆ ಇಳಿಯಲು ಹೋದ ನಾಲ್ವರು ಬಾಲಕಿಯರು ತಾಂತ್ರಿಕ ಅಡಚನೆಯಿಂದ ಲಿಫ್ಟ್ ನಲ್ಲಿಯೇ ಬಾಕಿಯಾಗಿದ್ದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ಸಂಜೆ ಸುಮಾರು 5.30 ವೇಳೆ ಕಲ್ಲಡ್ಕದ ಪ್ರೀತಿ ಟವರ್ ನಲ್ಲಿ ಘಟನೆ ನಡೆದಿದೆ.
ವಸತಿ ಸಂಕೀರ್ಣ ದಲ್ಲಿ ವಾಸವಾಗಿದ್ದ ಬಾಲಕಿಯರ ಜೊತೆಯಲ್ಲಿ ಬಾಲಕಿಯ ಸಂಬಂಧಿ ಬಾಲಕಿಯರು ಬಾಕಿಯಾಗಿದ್ದರು.ನೇರಳಕಟ್ಟೆ  ಗ್ರಾ.ಪಂ. ಮಾಜಿ ಸದಸ್ಯ ಲತೀಫ್ ನೇರಳಕಟ್ಟೆ ಅವರ ಮಗಳು ಫಿದಾನೈನ (15) ಲತೀಫ್ ಅವರ ಸಂಬಂಧಿಕ ನೇರಳಕಟ್ಟೆ ನಿವಾಸಿ ಇಸ್ಮಾಯಿಲ್ ಅವರ ಪುತ್ರಿ ಮಯಿಷೀನಾ (14) ಹಾಗೂ ನೇರಳಕಟ್ಟೆ ನಿವಾಸಿ ರಝಾಕ್ ಅವರ ಮಗಳು ಸಿಯಾನಾ(13) ವರ್ಷ ,ನೇರಳಕಟ್ಟೆ ನಿವಾಸಿ ಅಹಮ್ಮದ್ ಅವರ ಮಗಳು ಅಪ್ರಾ ( 19)  ಅವರು ಲೆಪ್ಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.
ಫಿದಾನೈನ ಅವಳ ಸಂಬಂಧಿಕರಾದ  ಮಕ್ಕಳು ಮನೆಯಿಂದ ಕೆಳಗೆ ಕಲ್ಲಡ್ಕದಲ್ಲಿರುವ ಅಂಗಡಿಗೆ ಸಾಮಗ್ರಿಗಳ ತರಲೆಂದು ವಸತಿ ಸಂಕೀರ್ಣ ದ ಲಿಫ್ಟ್ ಮೂಲಕ ಕಳೆಗೆ ಬರುತ್ತಿದ್ದಂತೆ ಅರ್ಧದಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್ ಕೆಟ್ಟು ಹೋಗಿದೆ.
ಬಾಲಕಿಯರು ಅ ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದು ಮನೆಮಂದಿ ಜೊತೆಗೆ ಸ್ಥಳೀಯರು ಲೈಫ್ ನ ಅರ್ಧ ಓಪನ್ ಮಾಡಿ ಅವರಿಗೆ ಗಾಳಿ ಬೀಸುವ ಉದ್ದೇಶದಿಂದ ಟೇಬಲ್ ಪ್ಯಾನ್ ಒಂದನ್ನು ಇಡುವ ವ್ಯವಸ್ಥೆ ಮಾಡಿದ್ದರು.
ಬಳಿಕ ಅಗ್ನಿಶಾಮಕ ದಳದವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.ಕಟ್ಟಡದ ಲಿಫ್ಟ್ ನ ಕೆಲಸ ಮಾಡಿದ ಸಂಬಂಧಿಸಿದ ಕಂಪೆನಿ ಯವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ಲಿಫ್ಟ್ ನ ತಾಂತ್ರಿಕ ದೋಷವನ್ನು ಸರಿಪಡಿಸಿ ಸುಮಾರು 7.15 ಗಂಟೆಗೆ ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಹೊರಗೆ ಬರುವಂತೆ ಮಾಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಎಸ್.ಐ. ಅವಿನಾಶ್ ಬೇಟಿ ನೀಡಿದ್ದಾರೆ.

More from the blog

ಅಕ್ರಮವಾಗಿ ಶ್ರೀಗಂಧ ತುಂಡುಗಳ ಸಾಗಾಟ : ಆರೋಪಿ ವಶಕ್ಕೆ

ಅಕ್ರಮವಾಗಿ ಶ್ರೀಗಂಧದ ಕೊರಡುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಅರೋಪಿ ಮತ್ತು ಸೊತ್ತನ್ನು ವಶಕ್ಕೆ ಪಡೆದ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರು ಎಂಬಲ್ಲಿ ನಡೆದಿದೆ. ಮಾನ್ಯ ಪೊಲೀಸ್ ಉಪ...

ನೇಹಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ

ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ ವಹಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೃತ ವಿದ್ಯಾರ್ಥಿನಿ ನೇಹಾ...

ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಪದ್ಮರಾಜ್ ಆರ್. ಪೂಜಾರಿ ಸಮುದ್ರವಿದ್ದಂತೆ: ನಿಕೇತ್ ರಾಜ್ ಮೌರ್ಯ

ಮಂಗಳೂರು: ಪದ್ಮರಾಜ್ ಅವರ ಹಿಂದೆ ಎಲ್ಲಾ ವರ್ಗದ ಜನರೂ ಇದ್ದಾರೆ. ಹಾಗಾಗಿ ಎಲ್ಲಾ ನದಿಗಳು ಸೇರಿ ಸಮುದ್ರವಾದಂತೆ ಪದ್ಮರಾಜ್ ಆರ್. ಪೂಜಾರಿ. ಅವರನ್ನು ಮನೆಮನೆಗೆ ತಲುಪಿಸಿ, ಗೆಲ್ಲಿಸಬೇಕು ಎಂದು ಕೆಪಿಸಿಸಿ ವಕ್ತಾರ ನಿಕೇತ್...

ವಿಟ್ಲ ಪಟ್ಟಣ ಪಂಚಾಯತ್ 2ನೇ ವಾರ್ಡ್ ನಲ್ಲಿ ನೀರಿಗಾಗಿ ಹಾಹಾಕಾರ : ಬೋರ್ ವೆಲ್ ಇದ್ದರೂ ಪಂಪ್ ಅಳವಡಿಸದ ಪಂಚಾಯತ್ : ಮತದಾನ ಬಹಿಷ್ಕಾರಕ್ಕೆ ಸಿದ್ಧತೆ

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್ ಪೊನ್ನೊಟ್ಟು ಪರಿಸರದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದು, ರಸ್ತೆಯಲ್ಲಿ ಕೊಳವೆ ಬಾವಿ ಇದ್ದರೂ ಇದುವರೆಗೂ ಪಂಚಾಯತ್ ಪಂಪ್ ಅಳವಡಿಸದೇ ನಿರ್ಲಕ್ಷ್ಯ ವಹಿಸಿದೆ...