ಈಶ್ವರ್ ಕ್ರೀಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳತ್ತಿರುವ *”ಜೋಡುಮಾರ್ಗ “* ಭಾರೀ ಕುತೂಹಲದ ಕಿರುಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಅಂತಿಮ ಹಂತದ ಎಡಿಟಿಂಗ್ ಕಾರ್ಯಗಳು ಭರದಿಂದ ಸಾಗುತ್ತಿದೆ.
ಎರಡು ಮಾರ್ಗ ಸೇರುವ ಸ್ಥಳದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳ ಸುತ್ತ ಕತೆಯನ್ನು ಹೊಂದಿರುವ ಈ ಚಿತ್ರದಲ್ಲಿ ತುಳುನಾಡಿನ ಹಿರಿಯ ಕಿರಿಯ ಕಲಾವಿದರು ಪಾತ್ರಕ್ಕೆ ಜೀವ ತುಂಬಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಚಿತ್ರೀಕರಣವನ್ನು ಸಂಪೂರ್ಣವಾಗಿ ಮಂಗಳೂರು ಮತ್ತು ಆಸುಪಾಸಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ಕಿಶೋರ್ ಮೂಡಬಿದ್ರೆ ಇವರ ತಾಂತ್ರಿಕ ನಿರ್ದೇಶನ ಸಲಹೆಯೊಂದಿಗೆ, ಪರೀಕ್ಷೀತ್ ಈಶ್ವರ್ ಮತ್ತು ಪ್ರತೀಕ್ ಸಾಲಿಯಾನ್ ರವರ ನಿರ್ಧೇಶನದೊಂದಿಗೆ , ಎನ್. ವಿ.ಎನ್ ಕ್ಯಾಮರಾ ಕೈ ಚಳಕದಲ್ಲಿ ಸುಂದರವಾಗಿ ಮೂಡಿ ಬಂದಿದೆ.
ರಾಜ್ ಪಾಲ್ ಕಲ್ಲಡ್ಕ ಇವರ ಪ್ರಸಾಧನ, ಮೇವಿನ್ ಜೋಯೆಲ್ ರವರ ಸಂಕಲನ ಈ ಕಿರುಚಿತ್ರಕ್ಕೆ ಇದೆ.
ಚಿತ್ರದ ಮುಖ್ಯ ಪಾತ್ರಗಳಲ್ಲಿ ಸರೋಜಿನಿ ಶೆಟ್ಟಿ, ಕು! ಶೋಭಾ ಶೆಟ್ಟಿ ಶಕ್ತಿನಗರ, ಎಚ್ಕೆ ನಯನಾಡು, ಚಂದ್ರಶೇಖರ್ ಸಿದ್ದಕಟ್ಟೆ,ವಿ.ಜೆ.ದೀಕ್ಷೀತ್, ಪ್ರಶಾಂತ್ ಆಚಾರ್ಯ, ವರುಣ್ ಬೆಂಗ್ರೆ, ಧೀರಜ್ ಕೊಟ್ಟಾರಿ, ಹಾಗೂ ಗೌರವ ಪಾತ್ರದಲ್ಲಿ ದಾನಿಶ್ ಶೆಟ್ಟಿ, ಪ್ರಜ್ವಲ್ ಕರ್ಪೆ, ಸುಧೀರ್ ಕುಮಾರ್, ನವನೀತ್, ಜಯಂತ್ ಕೆ ನಯನಾಡು, ಅಖಿಲ್ ಕೆ.ಐ. ಮನೀಶ್ ಸುವರ್ಣ ಶಕ್ತಿನಗರ, ಗಿರೀಶ್ ಕುಮಾರ್ ಅಭಿನಯಿಸಿದ್ದಾರೆ. ಶೀಘ್ರದಲ್ಲೇ ಈ ಕುತೂಹಲದ ಕಿರು ಚಿತ್ರ *” ಜೋಡುಮಾರ್ಗ “* ಬಿಡುಗಡೆಗೊಳ್ಳಲಿದೆ.