ಬಂಟ್ವಾಳ: ಬಂಟ್ವಾಳ ತಾಲೂಕಿನ ಒಟ್ಟು 57. ಗ್ರಾಮ ಪಂಚಾಯತ್ ಗಳ ಪೈಕಿ 26 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾದರೆ, 22. ಗ್ರಾ.ಪಂ.ಗಳು ಕಾಂಗ್ರೇಸ್ ಬೆಂಬಲಿತರಿಗೆ ದಕ್ಕಿದೆ, ಉಳಿದಂತೆ 1 ಎಸ್.ಡಿ.ಪಿ.ಐ. 4 ಸಮಬಲ ಹಾಗೂ 4 ಅತಂತ್ರ ಸ್ಥಿತಿಯಲ್ಲಿ ಫಲಿತಾಂಶ ಹೊರಬಿದ್ದಿದೆ.



ತಾಲೂಕಿನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅತೀ ಹೆಚ್ಚು ಸ್ಥಾನವನ್ನು ಪಡೆದರೆ ಕಾಂಗ್ರೆಸ್ ಕೂಡ ತೃಪ್ತಿ ಪಡೆದು ಕೊಂಡಿದೆ.
ಹೆಚ್ಚಿನ ಪಂಚಾಯತ್ ಗಳಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಬೆಂಬಲಿತರ ಮಧ್ಯೆ ನೇರಹಣಾಹಣಿ ಉಳಿದಂತೆ ಒಂದೆರಡು ಪಂಚಾಯತ್ ಗಳಲ್ಲಿ ಮಾತ್ರ ಎಸ್.ಡಿ.ಪಿ.ಸ್ಪರ್ಧೆ ನೀಡಿತ್ತು.
*ಬಿಜೆಪಿ ಬೆಂಬಲಿತರ ಪಾಲಿಗೆ ಒದಗಿ ಬಂದ 26 ಗ್ರಾಮ ಪಂಚಾಯತ್ ಗಳು ಯಾವುದು*
1. ಸಂಗಬೆಟ್ಟು
2. ಕುಕ್ಕಿಪಾಡಿ
3.ಪಿಲಾತಬೆಟ್ಟು
4.ಇರ್ವತ್ತೂರು
5.ಕಾವಳಮೂಡೂರು
6.ಉಳಿ
7.ಸರಪಾಡಿ
8.ಪಂಜಿಕಲ್ಲು
9.ಅಮ್ಟಾಡಿ
10.ರಾಯಿ
11. ಬಡಗ ಬೆಳ್ಳೂರು
12.ಅಮ್ಮುಂಜೆ
13. ಮೇರೆಮಜಲು
14.ಕಳ್ಳಿಗೆ
15.ನರಿಕೊಂಬು
16.ಬಾಳ್ತಿಲ
17.ಕಡೇಶ್ವಾಲ್ಯ
18.ಬರಿಮಾರು
19.ಗೋಳ್ತಮಜಲು
20.ಸಜೀಪ ಪಡು
21.ಅನಂತಾಡಿ
22.ಇಡ್ಕಿದು
23.ವಿಟ್ಲ ಮುಡ್ನೂರು
24.ವಿಟ್ಲ ಪಡ್ನೂರು
25.ಅಳಿಕೆ
26.ಕೇಪು
*ಕಾಂಗ್ರೇಸ್ ಬೆಂಬಲಿತ 22 ಗ್ರಾ.ಪಂ.ಗಳ ವಿವರ*
1.ಚೆನ್ನೈತ್ತೋಡಿ
2.ಕಾವಳಪಡೂರು
3.ಮಣಿನಾಲ್ಕೂರು
4.ನಾವೂರ
5.ಕರಿಯಂಗಳ
6.ಸಜೀಪ ಮೂಡ
7.ಕುರ್ನಾಡು
8.ಪಜೀರು
9.ಬಾಳೆಪುಣಿ
10.ನರಿಂಗಾನ
11.ಮಂಚಿ
12.ಇರಾ
13.ಬೋಳಂತೂರು
14.ಮಾಣಿ
15.ಪೆರ್ನೆ
16.ಕೊಳ್ನಾಡು
17.ಸಾಲೆತ್ತೂರು
18.ಕರೋಪಾಡಿ
19.ಕನ್ಯಾನ
20.ಪೆರುವಾಯಿ
21. ಮಾಣಿಲ
22.ಅಳಿಕೆ
*ಎಸ್.ಡಿ.ಪಿ.ಪಡೆದು ಕೊಂಡ ಗ್ರಾಮಪಂಚಾಯತ್ ಗಳು*
1. ಸಜೀಪ ನಡು
*ಸಮಬಲ ಪಡೆದ ಗ್ರಾಮ ಪಂಚಾಯತ್ ಗಳು*
1. ಪೆರಾಜೆ
2.ಅರಳ
3.ಕೆದಿಲ
4.ವೀರಕಂಭ
ನೆಟ್ಲಮುಡ್ನೂರು, ಬಡಗಕಜೆಕಾರು , ಸಜೀಪ ಮುನ್ನೂರು, ತುಂಬೆ ಈ 4 ಗ್ರಾಮ ಪಂಚಾಯತ್ ಅತಂತ್ರ ಸ್ಥಿತಿಯಲ್ಲಿ ಇದೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಒಟ್ಟು 39 ಸ್ಥಾನಗಳಲ್ಲಿ 20 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಸಾಧಿಸಿದರೆ 13 ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ 3. ಸಮಬಲ ಮೂರು ಗ್ರಾಮ ಪಂಚಾಯತ್ ಗಳು ಅತಂತ್ರವಾಗಿದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಒಟ್ಟು 317ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ 218 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಎಸ್.ಡಿ.ಪಿ.ಐ.25 , ಸ್ವತಂತ್ರ 7 ಮತ್ತು ಸಿ.ಪಿ.ಐ.3 ಅಭ್ಯರ್ಥಿಗಳು ಅಂತಿಮವಾಗಿ ವಿಜಯ ಸಾಧಿಸಿದ್ದಾರೆ.