ಬಂಟ್ವಾಳ: ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ಮುಂಜಾನೆ 5 ಗಂಟೆಯ ವೇಳೆ ಮುಕ್ತಾಯಗೊಂಡಿತು.



ಅತೀ ಹೆಚ್ಚು ಗ್ರಾಮ ಪಂಚಾಯತ್ ಗಳನ್ನೊಳಗೊಂಡ ಬಂಟ್ವಾಳ ತಾಲೂಕಿನ ಮತ ಎಣಿಕೆ ಕಾರ್ಯ ಬೆಳಗ್ಗೆ ಸರಿಯಾದ ಸಮಯಕ್ಕೆ ಆರಂಭವಾಗಿದ್ದರೂ ಕೂಡ ಬಹಳ ನಿಧಾನಗತಿಯ ಎಣಿಕೆ ಪ್ರಕ್ರಿಯೆ ನಡೆದಿದೆ.
ಬಹುತೇಕ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಬೇಗನೆ ಎಣಿಕೆ ಕಾರ್ಯಗಳು ಮುಗಿದಿದ್ದರೂ ಕೂಡ ಬಂಟ್ವಾಳ ತಾಲೂಕಿನ ಚುನಾವಣೆ ಎಣಿಕೆ ಕಾರ್ಯ ಮಾತ್ರ ಮುಂಜಾನೆವರೆಗೂ ಮುಂದುವರಿದಿತ್ತು.
ಅಭ್ಯರ್ಥಿಗಳ ಜೊತೆಗೆ ಏಜಂಟರುಗಳು , ಪೋಲೀಸರು ಮತ್ತು ಚುನಾವಣಾ ಕರ್ತವ್ಯ ದ ಅಧಿಕಾರಿಗಳು ರಾತ್ರಿ ನಿದ್ದೆ ಬಿಟ್ಟು ಮುಂಜಾನೆವರೆಗೂ ಕೆಲಸ ಕಾರ್ಯದಲ್ಲಿ ತೊಡಗಿದರು.
ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದ ಎಣಿಕೆ ಕಾರ್ಯ ಮುಂಜಾನೆ 5 ಗಂಟೆವರೆಗೂ ಸಾಗಿತು.