ನೆಟ್ಲಮುಡ್ನೂರು ಗ್ರಾಮಪಂಚಾಯತ್ ನ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿಗ 5 ಹಾಗೂ ಬಿಜೆಪಿ ಬೆಂಬಲಿಗ 5 ಅಭ್ಯರ್ಥಿಗಳು ವಿಜಯ ಸಾಧಿಸಿದ್ದು, ಓರ್ವ ಪಕ್ಷೇತರ ಅಭ್ಯರ್ಥಿ ನಿರ್ಣಾಯಕರಾಗಿ ಮೂಡಿಬಂದಿದ್ದಾರೆ.



ಕಾಂಗ್ರೇಸ್ ಬೆಂಬಲಿಗರಾದ ಶ್ರೀಧರ್ ರೈ, ಅಬ್ದುಲ್ ಲತೀಫ್, ಪ್ರೇಮ, ಲಕ್ಷ್ಮೀ ಕೂಸಪ್ಪ, ಶಮಿತ, ಬಿಜೆಪಿ ಬೆಂಬಲಿಗರಾದ ಧನಂಜಯ, ಅಶೋಕ್ ರೈ, ಜಯಂತಿ, ಶಾಲಿನಿ ಕೆ, ಶಕೀಲಾ ಹಾಗೂ ಪಕ್ಷೇತರ ಅಭ್ಯರ್ಥಿ ಸತೀಶ್ ವಿಜಯ ಸಾಧಿಸಿದ್ದಾರೆ.