ಅಳಿಕೆ : ಅಳಿಕೆ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 15 ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಈ ಪೈಕಿ 10 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ 5 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪದ್ಮನಾಭ ಪೂಜಾರಿ ಸಣ್ಣಗುತ್ತ, ಸದಾಶಿವ ಶೆಟ್ಟಿ ಅಳಿಕೆ, ಸೀತಾರಾಮ ಶೆಟ್ಟಿ ಮುಳಿಯ, ರವೀಶ್ ಕೆ., ಜಗದೀಶ್ ಶೆಟ್ಟಿ ಮುಳಿಯ ಗುತ್ತು, ಸರಸ್ವತಿ ಚೆಂಡುಕ್ಕಳ, ಬಬಿತಾ ನಾರಾಯಣ ಜೆಡ್ಡು, ಸೆಲ್ವಿನ್ ಡಿಸೋಜಾ ನೆಕ್ಕಿತ ಪುಣಿ, ಸರೋಜಿನಿ ಕೇಕನಾಜೆ. ಶಾಂಬವಿ ಸುಧಾಕರ ಮಡಿಯಾಳ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಕಾನ ಈಶ್ವರ ಭಟ್, ಶಶಿಕಲ ಆನೆಪದವು, ಸುಕುಮಾರ ಮುಳಿಯ, ಗಿರಿಜ ಬಿಟ್ಟಿಮೂಲೆ, ಭಾಗಿರತಿ ಆಯ್ಕೆಯಾಗಿದ್ದಾರೆ.


