ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಕೊನೆ ಕ್ಷಣದ ವರೆಗೆ ಭಾರೀ ಕುತೂಹಲವನ್ನು ಕೆರಳಿಸಿ ಕೊನೆಗೆ ನಡೆದ ಟಾಸ್ ನಲ್ಲಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.



ಬೆಳಗ್ಗೆ ಆರಂಭಗೊಂಡ ಮತ ಎಣಿಕೆ ಸಂಜೆ 6 ಗಂಟೆ ವೇಳೆಗೆ ಮುಕ್ತಾಯ ಗೊಂಡಿದ್ದು ಒಟ್ಟು 15 ಅಭ್ಯರ್ಥಿಗಳ ಪೈಕಿ 7 ಎಸ್.ಡಿ.ಪಿ.ಐ. ಅಭ್ಯರ್ಥಿಗಳು, 4 ಕಾಂಗ್ರೆಸ್ ಅಭ್ಯರ್ಥಿಗಳು, 3 ಬಿಜೆಪಿ ಅಭ್ಯರ್ಥಿಗಳು ವಿಜಯಿಯಾಗಿದ್ದರು. ಒಂದು ಅಭ್ಯರ್ಥಿಯ ಮತ ಎಣಿಕೆ ಬಾಕಿ ಆಗಿತ್ತು. 7 ಸ್ಥಾನಗಳಲ್ಲಿ ಗೆದ್ದ ಎಸ್.ಡಿ.ಪಿ.ಐ.ಗೆ ಅಧಿಕಾರ ಹಿಡಿಯಲು 1 ಸ್ಥಾನದ ಅಗತ್ಯ ಇತ್ತು.
ಗ್ರಾಮದ ನಾಲ್ಕನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿ ಸುಲೈಮಾನ್ 462 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಮನಾಥ ಕೂಡಾ 462 ಮತಗಳನ್ನು ಪಡೆದು ಸಮಾ ಸಮಾ ಗೊಂಡಿದ್ದರು. ಹೀಗಾಗಿ ಟಾಸ್ ಹಾಕುವ ಮೂಲಕ ವಿಜಯ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದ್ದು ಚುನಾವಣಾ ಅಧಿಕಾರಿ ಹಾಕಿದ ಟಾಸ್ ನಲ್ಲಿ ಎಸ್.ಡಿ.ಪಿ.ಐ. ಅಭ್ಯರ್ಥಿ ಸುಲೈಮಾನ್ ವಿಜಯಿಯಾದರು.