ವಿಟ್ಲ: ಕರೋಪಾಡಿ ಗ್ರಾಮ ಪಂಚಾಯತ್ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಒಟ್ಟು 16 ಸ್ಥಾನಗಳಲ್ಲಿ ಕಾಂಗ್ರೆಸ್ 10 ಮತ್ತು ಬಿಜೆಪಿ ಆರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಹತ್ಯೆಯಾದ ಜಲೀಲ್ ಕರೋಪಾಡಿ ಅವರ ಸಹೋದರ ಅನ್ವರ್ ಕರೋಪಾಡಿ ಜಯಗಳಿಸಿದ್ದಾರೆ.



ಕಾಂಗ್ರೆಸ್ ನ ಅನ್ವರ್, ಗಂಗಮ್ಮ ಯಾನೆ ಗೀತಾ, ಮೈಮುನಾ, ಮಮತ, ಅಗ್ನೇಸ್ ಡಿ ಸೋಜ, ಚೆನ್ನಪ್ಪ ನಾಯ್ಕ, ಜೂಲಿಯಾನ್ ಮೊಂತೆರೊ, ವೀರ ಹೆರಣಿಕ ಡಿ ಸೋಜ, ಸೂರ್ಯಕಾಂತಿ, ಹಮೀದ್, ಬಿಜೆಪಿಯ ಅಶ್ವಥ್, ನಳಿನಾಕ್ಷಿ, ರಘುನಾಥ ಶೆಟ್ಟಿ, ಶಶಾಂಕ್, ಪ್ರಸನ್ನ, ಜಯರಾಮ ಅವರು ಜಯಗಳಿಸಿದ್ದಾರೆ.