ಬಂಟ್ವಾಳ: ನಾವೂರು ಗ್ರಾಮಪಂಚಾಯತ್ ನಲ್ಲಿ ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸುವರ್ಣ ಕುಮಾರ್ ಜೈನ್ ಹಾಗೂ ತ್ರಿಶಲ ಸುವರ್ಣ ಜೈನ್ ದಂಪತಿ ಗೆಲುವಿನ ನಗೆ ಬೀರಿದ್ದಾರೆ.



ಇಲ್ಲಿನ ನಾವೂರು ವಾರ್ಡ್ ನಲ್ಲಿ ಸುವರ್ಣ ಕುಮಾರ್ ಜೈನ್ ಸ್ಪರ್ಧಿಸಿದ್ದು, ದೇವಸ್ಯ ವಾರ್ಡ್ ನಲ್ಲಿ ಇವರ ಪತ್ನಿ ತ್ರಿಶಲ ಸುವರ್ಣ ಜೈನ್ ಸ್ಪರ್ಧಿಸಿದ್ದು ಈರ್ವರೂ ಗೆಲುವು ಸಾಧಿಸಿದ್ದಾರೆ. ನಾವೂರು ಗ್ರಾಮಪಂಚಾಯತ್ ನ 17 ಸ್ಥಾನಗಳ ಪೈಕಿ 10 ರಲ್ಲಿ ಕಾಂಗ್ರೇಸ್ ಬೆಂಬಲಿತರು ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಈ ಮೂಲಕ ನಾವೂರು ಗ್ರಾಮಪಂಚಾಯತ್ ನಲ್ಲಿ ಕಾಂಗ್ರೇಸ್ ಅಧಿಕಾರಕ್ಕೇರಿದೆ. ಕಳೆದ ಬಾರಿ ನಾವೂರು ಗ್ರಾಮಪಂಚಾಯತ್ ನಲ್ಲಿ 12 ಸ್ಥಾನಗಳಲ್ಲಿ ಬಿಜೆಪಿ ಹಾಗೂ 5 ಸ್ಥಾನಗಳಲ್ಲಿ ಕಾಂಗ್ರೇಸ್ ಜಯಗಳಿಸಿತ್ತು.