ಬಂಟ್ವಾಳ: ಗ್ರಾ.ಪಂ. ಚುನಾವಣೆಯ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಡಿ.21 ಮತ್ತು 22 ರಂದು ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವುಂಟಾಗಲಿದೆ ಎಂದು ಕೆ.ಎಸ್.ಆರ್.ಟಿ.ಸಿ. ಬಿ.ಸಿ.ರೋಡ್ ಘಟಕದ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ. ಬಿ.ಸಿ.ರೋಡ್ ಘಟಕದಿಂದ ಬಸ್ ಗಳನ್ನು ಚುನಾವಣಾ ಕರ್ತವ್ಯಕ್ಕೆ ಒದಗಿಸಬೇಕಾಗಿರುವುದರಿಂದ ತಾಲೂಕಿನ ಸ್ಥಳೀಯ ಮತ್ತು ಗ್ರಾಮಾಂತರ ಸಾರಿಗೆ ಹಾಗೂ ಉಪ್ಪಳ, ಬದಿಯಡ್ಕ, ಕಾಸರಗೋಡು ರೂಟ್ ನಲ್ಲಿ ಸಂಚರಿಸುವ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು, ಪ್ರಯಾಣಿಕರು ಸಹಕರಿಸುವಂತೆ  ಪ್ರಕಟಣೆಯಲ್ಲಿ ಕೋರಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here