ಧರ್ಮಸ್ಥಳ: ಈ ದೇಶ ಕಂಡ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನುಮ ದಿನದ ಪ್ರಯುಕ್ತ ದೇಶದಲ್ಲಿ ಹೊಸದಾಗಿ ಜಾರಿಯಾಗಿರುವ ಕೃಷಿ ಮಸೂದೆಯ ಬಗ್ಗೆ ಕೃಷಿಕರು ಮತ್ತು ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಬಿಜೆಪಿ ಪ್ರಕಾಶನ ಪ್ರಕೋಷ್ಠ ಬಿಡುಗಡೆ ಮಾಡಿರುವ “ಕೃಷಿ ಮಸೂದೆ ಸತ್ಯ ಮತ್ತು ಮಿಥ್ಯ” ಎಂಬ ಪುಸ್ತಕವನ್ನು ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮೂಲಕ ತಾಲೂಕಿನ ಸುಮಾರು 5000 ಕೃಷಿಕರಿಗೆ ಪುಸ್ತಕವನ್ನು ತಲುಪಿಸುವ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಾಲನೆ ನೀಡಲಾಯಿತು.