Saturday, October 21, 2023

ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದರೋಡೆ ಹಾಗೂ ಡಕಾಯಿತಿ ಪ್ರಕರಣ ದಾಖಲು

Must read

ಬಂಟ್ವಾಳ : ರಾಜಕೀಯ ವಿಚಾರದಲ್ಲಿ ನಡೆದ ಗಲಾಟೆ ಬಳಿಕ ಇಂದು ನಾಟಕೀಯ ತಿರುವು ಪಡೆದು ದರೋಡೆ ಹಾಗೂ ಡಕಾಯಿತಿ ಪ್ರಕರಣವಾಗಿ ಪರಿವರ್ತನೆ ಗೊಂಡು ಇತ್ತಂಡಗಳು ಗ್ರಾಮಾಂತರ ಪೋಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲುಗೊಂಡಿದೆ.

ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಪಾಂಡವರಗದ್ದೆ ಎಂಬಲ್ಲಿ ಮಂಗಳವಾರ ಮತದಾನದ ಬಳಿಕ ರಾತ್ರಿ ವೇಳೆ ನಡೆದ ಗಲಾಟೆ ಬುಧವಾರ ಬೆಳಿಗ್ಗೆ ವೇಳೆ ನಾಟಕೀಯ ತಿರುವು ಪಡೆದಿದ್ದು ಗ್ರಾಮಾಂತರ ಪೋಲೀಸ್ ಠಾಣೆಯ ಲ್ಲಿ ಇತ್ತಂಡಗಳ ಮೇಲೆ ಪ್ರಕರಣ ದಾಖಲಾಗಿದೆ.

ಪುರಂದರ ಶೆಟ್ಟಿ ಅವರು ತೋಟಕ್ಕೆ ನೀರು ಬಿಟ್ಟು ಬರುವ ವೇಳೆ ದಾಮೋದರ ಆಳ್ವ ಮತ್ತು ಅವರ ಹದಿನೈದು ಜನರ ಗುಂಪು ಪುರಂದರ ಶೆಟ್ಟಿ ಅವರಿಗೆ ಕೈಯಿಂದ ಹಲ್ಲೆ ನಡೆಸಿ ಬಳಿಕ ಕಾರಿನಲ್ಲಿ ಎಳೆದುಕೊಂಡು ಹೋಗಿ ಜೀವ ಬೆದರಿಕೆ ಹಾಕಿದ್ದಲ್ಲದೆ ಕೈಯ ಬೆರಳಿನಲ್ಲಿದ್ದ ಬಂಗಾರದ ಉಂಗುರವನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಲ್ಲಿ ದೂರು ದಾಖಲಾಗಿದೆ.
ಇವರ ದೂರಿಗೆ ಪ್ರತಿಯಾಗಿ ದಾಮೋದರ ಆಳ್ವ ಪತ್ನಿ ಸುಧಾಮಣಿ ಅವರು ದೂರು ನೀಡಿದ ಬಗ್ಗೆ ಯೂ ವರದಿಯಾಗಿದೆ.
ದಾಮೋದರ ಮತ್ತು ಅವರ ಪತ್ನಿ ಸುಧಾಮಣಿ ರಾತ್ರಿ ಮನೆಯಲ್ಲಿರುವ ವೇಳೆ ಪಾನಮತ್ತರಾಗಿ ಪುರಂದರ ಶೆಟ್ಟಿ ಮತ್ತು ಆತನ ಸಂಗಡಿಗರು ಸೇರಿ ಮನೆಯ ಬಾಗಿಲು ತುಳಿದು ಮನೆಯೊಳಗೆ ನುಗ್ಗಿ ದಾಮೋದರ ಅವರಿಗೆ ಹಲ್ಲೆ ನಡೆಸಿ ಜೀವ ಬೇದರಿಕೆ ಹಾಕಿದ್ದಾರೆ ಅದೇ ಸಂದರ್ಭದಲ್ಲಿ ಪುರಂದರ ಶೆಟ್ಟಿ ಜೊತೆ ಬಂದ ಸಂಗಡಿಗರು ಇವರ ಪತ್ನಿ ಸುಧಾಮಣಿಯವರ ಕುತ್ತಿಗೆಯ ಲ್ಲಿದ ಸರವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿದೆ.

ಗ್ರಾಮ ಪಂಚಾಯತ್ ಚುನಾವಣೆಯ ವಿಚಾರದಲ್ಲಿ ಎರಡು ವ್ಯಕ್ತಿಗಳ ನಡುವಿನ ಭಿನ್ನಾಭಿಪ್ರಾಯ ರಾಜಕೀಯ ತಿರುವು ಪಡೆದು ಬಳಿಕ ನಾಟಕೀಯ ಬೆಳವಣಿಗೆಯ ಲ್ಲಿ ರಾಬರಿ ಮತ್ತು ಡಕಾಯಿತಿ ಪ್ರಕರಣವಾಗಿ ಮಾರ್ಪಾಡು ಗೊಂಡಿದೆ.

More articles

Latest article