Sunday, October 22, 2023

ರಾಜ್ಯದಲ್ಲಿ 14 ಜನರಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆ

Must read

ಬೆಂಗಳೂರಿಗೆ ಆಗಮಿಸಿರುವ 14 ಜನ ವಿದೇಶಿಗರಲ್ಲಿ ಕೊರೊನಾ ರೂಪಾಂತರ ಸೋಂಕು ಪತ್ತೆಯಾಗಿದ್ದು, ಸ್ಯಾಂಪಲ್ ನ್ನು ನಿಮ್ಹಾನ್ಸ್ ಗೆ ಕಳುಹಿಸಿಕೊಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿದೇಶದಿಂದ ಬಂದಿರುವ 1,638 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಅವರಲ್ಲಿ 14 ಜನರಿಗೆ ಪಾಸಿಟಿವ್ ಬಂದಿದೆ. ಎಲ್ಲರ ವರದಿಯನ್ನು ನಿಮ್ಹಾನ್ಸ್ ಲ್ಯಾಬ್ ಗೆ ಕಳುಹಿಸಲಾಗಿದ್ದು, ದೀರ್ಘ ಪರೀಕ್ಷೆ ಬಳಿಕ ನಾಳೆ ಖಚಿತ ಮಾಹಿತಿ ಹೊರಬೀಳಲಿದೆ ಎಂದರು.

ಸೋಂಕಿತರ ವರದಿ ಐಸಿಎಂಆರ್ ಗೆ ಕೊಡಲು ಕೇಂದ್ರ ಸರ್ಕಾರ ಸೂಚಿಸಿದ್ದು, ಕೇಂದ್ರವೇ ಸೋಂಕಿತರ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

 

More articles

Latest article