Tuesday, April 9, 2024

ನೆನಪುಗಳ ಜೊತೆಗೊಂದಷ್ಟು ಕ್ಷಣಗಳು….

ನಿನ್ಗೊತ್ತಾ, ಬಹುಷಃ ನಿನ್ನಿಂದ ನನಗೊದಗಿದ ಸಂಭ್ರಮ, ನೋವಿನ ಕ್ಷಣಗಳು ನನ್ ಬದುಕಲ್ಲಿ ಮತ್ತೆ ಬರಲಾರದು, ಬರಬಾರದು ಕೂಡ. 2019ರ ಅಂತ್ಯದಲ್ಲಿರುವಾಗ ಎಲ್ಲರ ಹಾಗೆ ನಾನೂ ಬಯಸಿದೆ, ವರ್ಷಪೂರ್ತಿ ಖುಷಿಯಾಗಿರ್ಬೇಕು ಅಂತ. ಆದ್ರೆ ಒಂದೆರಡು ತಿಂಗಳು ಕಳೆದು ಮಾರ್ಚ್ ತಿಂಗಳು ಬರುವಷ್ಟರಲ್ಲಿ ಎಲ್ಲಾ ಅಸ್ತವ್ಯಸ್ತವಾಗಿತ್ತು. ಕೊರೋನಾ ಭಯ ಉಸಿರುಗಟ್ಟಿಸಿ ಮನೆಯೊಳಗೇ ನನ್ನ ಬಂಧಿಯಾಗುವಂತೆ ಮಾಡಿತು. ಎಲ್ಲೆಲ್ಲೂ ಸಾವಿನ ಆಕ್ರಂದನಗಳು ಮುಗಿಲು ಮುಟ್ಟಿದಾಗ ಛೇ, ಒಬ್ಬೊಬ್ಬರೇ ಹೀಗೆ ಸಾಯುವ ಬದಲು ಇಡೀ ಜಗತ್ತೇ ಅಂತ್ಯ ಕಂಡರೆ ಚೆನ್ನಾಗಿತ್ತು ಅನ್ಸಿದ್ರಲ್ಲಿ ತಪ್ಪೇನು ಹೇಳು? ನನ್ನಾತ್ಮೀಯರನ್ನೇ ನಾನು ಅನುಮಾನ ಸಂದೇಹದಿಂದ ನೋಡಿ ದೂರವಿಡಬೇಕಾದ ಪರಿಸ್ಥಿತಿ ಬಂದಾಗ ಬದುಕಿ ಸತ್ತಿದ್ದೆ ನಾನು.
ಹೀಗೊಂದು ಭಯಾನಕವಾದ, ಹೀನಾಯವಾದ ಕ್ಷಣಗಳು ಬದುಕಲ್ಲಿ ಬರುತ್ತೆ ಎಂಬ ಕಲ್ಪನೆಯೂ ಇಲ್ಲದೆ ಹಾಯಾಗಿದ್ದವಳನ್ನು ಕೊರೋನಾ ಒಂಟಿಯಾಗಿಸಿದ್ದು ಸುಳ್ಳಲ್ಲ. ಅದೇ ಮನೆ, ಅದೇ ನಾಲ್ಕು ಕೊಠಡಿಗಳು , ಜೀವವಿಲ್ಲದ ವಸ್ತುಗಳ ಜೊತೆ ನನ್ನ ನಿತ್ಯ ಸಂಭಾಷಣೆ. ಒಳಗಿನ ತಳಮಳ ಬಹುಷಃ ಆ ನಿರ್ಜೀವ ವಸ್ತುಗಳಿಗೂ ಅರ್ಥವಾಗಿರಬಹುದು. ಜೀವ ಉಳಿಸಿಕೊಳ್ಳಲು ಕ್ಷಣ ಕ್ಷಣವೂ ಆತಂಕದಿಂದ ಪರದಾಡಿದ ಆ ಕ್ಷಣಗಳ ನೆನಪು ಮತ್ತೆ ನನಗೆ ಬೇಡವೇ ಬೇಡ. ಎಲ್ಲರೂ ಇದ್ದು ಯಾರೂ ಇಲ್ಲದವರ ಹಾಗೆ ಸಾಲು ಸಾಲು ಹೆಣಗಳ ರಾಶಿ ಕಂಡು ಬಿಕ್ಕಿ ಬಿಕ್ಕಿ ಅತ್ತು ಸುರಿದ ಕಣ್ಣೀರಿಗೆ ಬೆಲೆ ಕಟ್ಟುವವರಾರು ಹೇಳು?
ಬೀದಿ ಬದಿಯ ಜೀವಗಳು ಬೀದಿ ನಾಯಿಗಳ ಹಾಗೇ ಮಸಣದ ಗುಂಡಿ ಸೇರುವಾಗ ದುಃಖದ ಕಟ್ಟೆಯೊಡೆದಿತ್ತು. ಇದೆಲ್ಲಾ ನಿನಗೆ ಹೇಗೆ ಅರ್ಥವಾದೀತು?
ನನ್ ಶಾಲೆಯ ಪುಟ್ಟ ಪುಟ್ಟ ಮಕ್ಕಳ ಜೊತೆ ಜೀವನದ ಖುಷಿಯನ್ನೆಲ್ಲಾ ಕಂಡು ನೆಮ್ಮದಿಯ ತುಂಬು ಜೀವನ ನಡೆಸುವಾಗಲೇ ಶಾಲೆಗೇ ಬೀಗ ಹಾಕುವಂತೆ ಮಾಡಿದ ನಿರ್ದಯಿ ನೀನು. ಇಡೀ ಶಾಲೆಗೆ ಸೂತಕ ಕವಿದ ವಾತಾವರಣ ಕವಿದಾಗ ನನ್ನ ಮನದೊಳಗಾದ ಭಾವ ವಿಪ್ಲವಗಳನ್ನು ನೀ ಅರಿಯಲಾರೆ. ಮಕ್ಕಳ ಕಲರವವಿಲ್ಲದ ಆ ಶೋಚನೀಯ ಕ್ಷಣಗಳ ನೆನಪು ಇಂದಿಗೂ ಕಣ್ತುಂಬುವಂತೆ ಮಾಡುತ್ತಿದೆ.
ಕೈ ಮುಗಿದು ಬೇಡುತ್ತಿರುವೆ, ಕನಸಿನಲ್ಲಿಯೂ ನಿನ್ನ ನೆನಪಿಸಿಕೊಳ್ಳಲಾರೆ. ನೀ ತಂದಿಟ್ಟ ಕಷ್ಟಗಳು ನಿನ್ನೊಂದಿಗೇ ಸುಟ್ಟು ಭಸ್ಮವಾಗಲಿ. ಮರಳಿ ಮತ್ತೆಂದೂ ಬರುವ ಯತ್ನ ಮಾಡ್ಬೇಡ. ಚಿಗುರುವ ಕನಸುಗಳನ್ನು ಚಿವುಟಬೇಡ. ಇನ್ನಾದರೂ ನನ್ ದೇಶದ ಜನತೆ ಚೆನ್ನಾಗಿರಲಿ ಎಂಬ ಆಸೆಗೆ ಕಲ್ಲು ಹಾಕ್ಬೇಡ.ಗುಡ್ ಬೈ 2020.

 

ಪ್ರಮೀಳಾ ರಾಜ್

More from the blog

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....

ಬಂಟ್ವಾಳದ ಕುದ್ಕೋಳಿ: ಹೊತ್ತಿ ಉರಿದ ಡಸ್ಟರ್ ಕಾರು

ಬಂಟ್ವಾಳ: ಬಂಟ್ವಾಳ- ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಡಸ್ಟರ್ ಕಾರೊಂದು ಏಕಾಏಕಿ ಬೆಂಕಿ ಹತ್ತಿ ಉರಿದ ಘಟನೆ ಇಂದು ಬೆಳಗ್ಗೆ (ಸೋಮವಾರ) ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಬಳಿಕ ಸ್ಥಳೀಯರು ಹಾಗೂ ಬಂಟ್ವಾಳ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...