ವಿಟ್ಲ: ಕರ್ನಾಟಕ ಎಸ್‌ಕೆಎಸ್‌ಎಸ್‌ಎಫ್ ಅಬುದಾಭಿ ವತಿಯಿಂದ ನಮ್ಮೂರಿಗೊಂದು ಅಂಬುಲೆನ್ಸ್ ಸೇವೆ ಗಡಿನಾಡ ಸಹಚರ” ಲೋಕಾರ್ಪಣೆ ಕುದ್ದುಪದವು ಮೇಗಿನಪೇಟೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅಮೀರ್ ತಂಗಳ್ ಕಿನ್ಯ ಉದ್ಘಾಟಿಸಿ ದುವಾಃ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಖಾ ಮುಖಂಡರುಗಳಿಗೆ ಆಂಬುಲೆನ್ಸ್ ಕೀ ಹಸ್ತಾಂತರ ಮಾಡಲಾಯಿತು. ಅಲ್ ಹುದಾ ಚಾರಿಟಿ ಫೌಂಡೇಶನ್ ಮುಚ್ಚಿರಪದವು ಹಾಗೂ ಮುಹಮ್ಮದ್ ಸೂಫಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಎಸ್‌ಕೆಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮಾತನಾಡಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಎಂಬ ಸಂಘಟನೆ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಲ್ಪಟ್ಟು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶ ವಿಭಜನೆಯ ಸಂದರ್ಭದಲ್ಲಿ ನಾವು ಭಾರತವನ್ನು ಬಿಟ್ಟು ಹೋಗಲಾರೆವು ಎಂದು ಘೋಷಣೆ ಮಾಡಿದ ಹೆಮ್ಮೆಯ ಸಂಘಟನೆಯಾಗಿರುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಿಟ್ಲ ವಲಯ ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್ ಕಡಂಬು, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಕೇಪು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ರೈ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಮರಕ್ಕಿಣಿ ಮುದರ್ರಿಸ್ ನೌಫಲ್ ಹುಸೈನ್ ಫೈಝಿ, ಅಡ್ಯನಡ್ಕ ಮುದರ್ರಿಸ್ ಅಬ್ದುಲ್ಲಾ ರಹ್ಮಾನಿ, ಕುದ್ದುಪದವು ಇಮಾಮ್ ಮುನೀರ್ ಅಝ್ಹರಿ, ಶಾಹಜಾನ್ ಅಝ್ಹರಿ, ಮರಕ್ಕಿಣಿ ಜಮಾಅತ್ ಅಧ್ಯಕ್ಷ ಶರೀಫ್ ಮೂಸಾ, ವೈದ್ಯಾಧಿಕಾರಿ ರಮೇಶ್ ಕುಮಾರ್ ಬಿಳಿರಾಯ, ಗೋಪಾಲ ಪಾಟಾಳಿ, ಶ್ರೀನಿವಾಸ್ ಶೆಟ್ಟಿ ಬೇಂಗ್ರೋಡಿ, ಅಲ್ ಹುದಾ ಚಾರಿಟಿ ಫೌಂಡೇಶನ್ ಮುಚ್ಚಿರಪದವು ಅಧ್ಯಕ್ಷ ಶಾಫಿ ಮುಚ್ಚಿರಪದವು, ಅಬ್ದುಲ್ ರಝಾಕ್ ಸಾರಡ್ಕ, ತಾಜ್ ಗಡಿನಾಡು, ಪೊಡಿಯ ಹಾಜಿ ಮೈರ, ಕಲಂದರ್ ಮಂಜನಡ್ಕ, ಅಡ್ಯನಡ್ಕ ಜುಮಾ ಮಸೀದಿ ಅಧ್ಯಕ್ಷ ಉಸ್ಮಾನ್ ಮರಕ್ಕಿಣಿ, ಮುರಳೀಧರ್ ರೈ ಕೇಪು, ಎಸ್‌ಕೆಎಸ್‌ಎಸ್‌ಎಫ್ ಕುದ್ದುಪದವು ಶಾಖಾಧ್ಯಕ್ಷ ಮಹಮ್ಮದ್ ಎಸ್. ಮರಕ್ಕಿಣಿ ಶಾಖಾಧ್ಯಕ್ಷ ಇಬ್ರಾಹಿಂ ಕೆದುಮೂಲೆ ಉಪಸ್ಥಿತರಿದ್ದರು.
ಹನೀಫ್ ಹರಿಯಮೂಲೆ ಪ್ರಸ್ತಾವನೆಗೈದರು. ಬದ್ರುದ್ದೀನ್ ಅಡ್ಕ ಸ್ವಾಗತಿದರು. ಕರೀಮ್ ಮೂಸಾ ವಂದಿಸಿದರು.


