ವಿಟ್ಲ: ಕ್ಯಾಂಪ್ಕೋ ಸಂಸ್ಥೆಯು ಸದಸ್ಯರ ಆರೋಗ್ಯ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಸದಸ್ಯರ ಆರೋಗ್ಯದ ಬಗ್ಗೆವಿಶೇಷ ಕಾಳಜಿಯನ್ನು ಸದಾ ವಹಿಸುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಅವರು ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯ ಅಡಿಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸದಸ್ಯರಾದ ತಿರುಮಲೇಶ್ವರ ಭಟ್, ಮುರಬೈಲು ಕಲ್ಲಡ್ಕ ಇವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಧನ ಸಹಾಯದ ಚೆಕ್ಕನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಮಾತನಾಡಿದರು. ಸಕ್ರಿಯ ಸದಸ್ಯ ಬೆಳೆಗಾರರಿಗೆ ಹಳೆಯ ಸಹಾಯ ಯೋಜನೆಗಳ ಜೊತೆಗೆ ಕಿಡ್ನಿ ಕಸಿ ಚಿಕಿತ್ಸೆಗೆ 3ಲ.ರೂ, ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ೨ ಲ.ರೂ., ಆಂಜಿಯೋಪ್ಲಾಸ್ಟಿಗೆ 50 ಸಾವಿರ ರೂ. ಡಯಾಲಿಸಿಸ್‌ಗೆ ೩೦ ಸಾವಿರ ರೂ. ನೀಡುವ ಹೊಸ ಯೋಜನೆಯನ್ನೂ ಜಾರಿಗೆ ತರಲಾಗಿದೆ ಎಂದು ಹೇಳಿದರು. ಈ ಧನ ಸಹಾಯ 3 ವರ್ಷಗಳಿಂದ ನಿರಂತರ ಸಂಸ್ಥೆಗೆ ಅಡಕೆ ಹಾಕುವ ಸಕ್ರೀಯ ಬೆಳೆಗಾರರಿಗೆ ಲಭಿಸುತ್ತದೆ ಎಂದು ವಿವರಿಸಿದರು.
ಕಲ್ಲಡ್ಕ ರೈತರ ಸೇವಾ ಸಂಘ ನಿ. ಕಲ್ಲಡ್ಕ ಇದರ ಅಧ್ಯಕ್ಷರಾದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ರೂ. 50000/- ಮೌಲ್ಯದ ಚೆಕ್ಕನ್ನು ತಿರುಮಲೇಶ್ವರ ಭಟ್ ಅವರಿಗೆ ಹಸ್ತಾಂತರಿಸಿದರು.
ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ಪುತ್ತೂರು ಪ್ರಾಂತೀಯ ಮುಖ್ಯ ಅಧಿಕಾರಿ ಗೋವಿಂದ ಭಟ್, ವಿಟ್ಲ ಶಾಖಾಧಿಕಾರಿ ರಾಜೇಶ್ ಹಾಗೂ ಸಿಬ್ಬಂದಿ ಜಯಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here