Monday, April 8, 2024

ಮರಕ್ಕಿಣಿ: ನವೀಕೃತ ಜುಮ್ಮಾ ಮಸೀದಿ ಉದ್ಘಾಟನೆ

ವಿಟ್ಲ: ವಿಟ್ಲ ಸಮೀಪದ ಮರಕ್ಕಿಣಿ ಬದರ್ ಹುಸೈನ್ ನವೀಕೃತ ಜುಮಾ ಮಸೀದಿಯ ಉದ್ಘಾಟನಾ ಸಮಾರಂಭ ನಡೆಯಿತು.
ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಅಧ್ಯಕ್ಷ ಅಸೈಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ನವೀಕೃತ ಮಸೀದಿಯನ್ನು ಉದ್ಘಾಟಿಸಿ, ನಮಾಜ್‌ಗೆ ನೇತೃತ್ವ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದುವಾಃ ಆಶೀರ್ವಚನ ನೀಡಿ ಮಾತನಾಡಿ ಮಸೀದಿ ನಿರ್ಮಾಣ ಕಾರ್ಯ ಪವಿತ್ರ ಕಾರ್ಯವಾಗಿದೆ. ಶುದ್ಧವಾದ ಸ್ಥಳವೆಂದರೆ ಅದು ಮಸೀದಿ ಆಗಿರುತ್ತದೆ. ಅದರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಸೀದಿ ದೇವರು ಪ್ರಪಂಚದಲ್ಲಿ ಇಷ್ಟಪಡುವ ಸ್ಥಳವಾಗಿದೆ ಎಂದು ಹೇಳಿದರು.
ಮಸೀದಿ ಆಡಳಿತ ಸಮಿತಿ ವತಿಯಿಂದ ಮುತ್ತುಕೋಯ ತಂಙಳ್, ಕೃಷಿಕ ಕೃಷ್ಣ ಭಟ್ ಮರಕ್ಕಿನಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಎನ್‌ಪಿಎಂ ಝೈನುಲ್ ಅಬಿದೀನ್ ತಂಙಳ್ ಕೇರಳ ಅಧ್ಯಕ್ಷತೆ ವಹಿಸಿದ್ದರು.
ಬೆಳಗ್ಗೆ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಶರೀಫ್ ಮೂಸಾ ಕುದ್ದುಪದವು ಅವರ ಅಧ್ಯಕ್ಷತೆಯಲ್ಲಿ ಜುಮಾ ಮಸೀದಿಯಲ್ಲಿ ಸೇವೆಗೈದ ಉಸ್ತಾದರುಗಳ ಬೃಹತ್ ಸೇವಾ ಸಂಗಮ ನಡೆಯಿತು. ಶನಿವಾರ ಬದರ್ ಹುಸೈನ್ ನವೀಕೃತ ಜುಮಾ ಮಸೀದಿಯ ಉದ್ಘಾಟನೆಯ ಪ್ರಯುಕ್ತ ಸೈಪುಲ್ ಹುದಾ ಹಳೆ ವಿದ್ಯಾರ್ಥಿ ಸಂಘ, ದ.ಕ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ತಂಡದ, ಮತ್ತು ದ.ಕ ಇಂಡಿಯನ್ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು. ಇದರಲ್ಲಿ ಸುಮಾರು ೮೦ ಕ್ಕಿಂತಲೂ ಅಧಿಕ ದಾನಿಗಳು ರಕ್ತದಾನ ಮಾಡಿದರು. ಜಿಫ್ರಿ ಮುತ್ತುಕೋಯ ತಂಙಳ್ ಅವರನ್ನು ದಫ್ ಮೂಲಕ ಸ್ವಾಗತಿಸಲಾಯಿತು. ಕಮರ್ ದಫ್ ತಂಡ ಕುಕ್ಕಾಜೆ ಅವರಿಂದ ದಫ್ ಪ್ರದರ್ಶನ ನಡೆಯಿತು. ಮರಕ್ಕಿಣಿ, ಕುದ್ದುಪದವು ಮತ್ತು ಅಡ್ಯನಡ್ಕ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ತಂಡದ ಸದಸ್ಯರು ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಿದರು.
ಮೀರ್ ಝಾಹಿದ್ ಅಲ್ ಬುಖಾರಿ ತಂಙಳ್ ಮಂಜೇಶ್ವರ, ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಶರೀಫ್ ಮೂಸಾ ಕುದ್ದುಪದವು, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ, ಮಸೀದಿ ಖತೀಬು ನೌಫಲ್ ಹುಸೈನ್ ಫೈಝಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರಶೀದ್ ವಿಟ್ಲ, ವಿಟ್ಲ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಅಶ್ರಫ್ ಮಾಣಿಮಜಲು, ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್, ಅಬೂಬಕ್ಕರ್ ಫೈಝಿ ದೇಲಂಪಾಡಿ, ತಲಂಗಾರ ಖತೀಬು ಹಮೀದ್ ಫೈಝಿ ಅಡೂರು, ಅಡ್ಯನಡ್ಕ ಖತೀಬು ಅಬ್ದುಲ್ ರಹಿಮಾನಿ, ಅಡ್ಕಸ್ಥಳ ಮುದರಿಸ್ ಅಬ್ದುಲ್ ರಝಾಕ್ ಮಿಸ್ಬಾಯಿ, ಬೆಳ್ಳಾರೆ ಮುದರಿಸ್ ತಾಜುದ್ದೀನ್ ರಹಿಮಾನಿ, ಕೇಪು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕರೀಂ ಕುದ್ದುಪದವು, ಅಲಿ ಮಾಣಿಪದವು, ಎಸ್. ಮೊಹಮ್ಮದ್, ಬದ್ರುದ್ದೀನ್ ಮರಕ್ಕಿಣಿ ಮೊದಲಾದವರು ಉಪಸ್ಥಿತರಿದ್ದರು.

More from the blog

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...

ದ್ವಿತೀಯ ಪಿಯುಸಿ ಫಲಿತಾಂಶ ಶೀಘ್ರ ಪ್ರಕಟ

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 3 ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಫಲಿತಾಂಶ ಪ್ರಕಟಗೊಂಡ ನಂತರ, ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು...

ಇಂದು ಸಂಪೂರ್ಣ ಸೂರ್ಯಗ್ರಹಣ : ಈ ರಾಶಿಯವರಿಗೆ ಕಾದಿದೆ ಆಪತ್ತು

ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸುತ್ತಿದೆ. ಸುಮಾರು 54 ವರ್ಷಗಳ ಬಳಿಕ ಸಂಭವಿಸುತ್ತಿರುವ ಸುದೀರ್ಘ ಸೂರ್ಯಗ್ರಹಣ ಇದಾಗಿದ್ದು, ಮಾಹಿತಿಗಳ ಪ್ರಕಾರ ಏಪ್ರಿಲ್ 8 ರಂದು ಸೂರ್ಯಗ್ರಹಣ ರಾತ್ರಿ 9.12 ರಿಂದ 1.25 ರವರೆಗೆ...