Friday, April 26, 2024

ಬಜಿರೆ ಬೆಳ್ಳಿಬೆಟ್ಟು ನಿವಾಸಿ ನೇಣುಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ವೇಣೂರಿನ ಬಜಿರೆ ಗ್ರಾಮದ ಬೆಳ್ಳಿಬೆಟ್ಟು ನಿವಾಸಿ ರಾಜೇಶ್ ಎಂಬಾತ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ತಲೆಯ ಎಡಭಾಗದಲ್ಲಿ ಗುಳ್ಳೆಯೊಂದು ಎದ್ದಿದ್ದು ಚಿಕಿತ್ಸೆ ನಡೆಯುತ್ತಿತ್ತು. ಇತ್ತೀಚೆಗೆ ಕಾಲುಗಳು ಬಲಹೀನಗೊಂಡು ನಡೆಯಲು ಕಷ್ಟವಾಗಿದ್ದು, ರಾತ್ರಿ ಮಲಗಿದವರು ಬೆಳಿಗ್ಗೆ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವೇಣೂರು ಠಾಣಾ ಪೋಲಿಸರು ಕೇಸು ದಾಖಲಿಸಿಕೊಂಡಿದ್ದಾರೆ.

More from the blog

ಲೋಕಸಭಾ ಚುನಾವಣೆ : ಶೇಕಡಾವಾರು ಮತದಾನದ ವಿವರ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ 14 ಕ್ಷೇತ್ರಗಳಿಗೆ ಮತದಾನ ನಡೆಯಿತು. ಸಂಜೆ 7 ಗಂಟೆಯ ವೇಳೆಗೆ ಬಂದ ಮಾಹಿತಿ ಪ್ರಕಾರ 14 ಕ್ಷೇತ್ರಗಳಲ್ಲಿ ಶೇಕಡಾ 65ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದ...

ಲೋಕಸಭಾ ಚುನಾವಣೆ, ಬಂಟ್ವಾಳದಲ್ಲಿ ಶೇ.79.9 ಮತದಾನ

ಬಂಟ್ವಾಳ ವಿಧಾನ ಸಭಾ ಕ್ಷೇತ್ರದದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಅಂದಾಜು ಶೇ.79.9 ಮತದಾನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅಂದಾಜು ಶೇ.77.44 ರಷ್ಟು ಮತದಾನವಾಗಿದೆ. ಬಿಸಿಲನ್ನು ಲೆಕ್ಕಿಸದೆ, ಸೆಕೆಯ ನಡುವೆಯೂ ಮತದಾರರು ತನ್ನ ಜವಾಬ್ದಾರಿಯನ್ನು...

ಕೈ ಕೊಟ್ಟ ಮತಯಂತ್ರ…,ನಾಯಿಲದಲ್ಲಿ ಅರ್ಧ ತಾಸುಗಳ ಕಾಲ ತಡವಾಗಿ ಆರಂಭವಾದ ಮತದಾನ ..

ಮತದಾನದ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ 35 ನಿಮಿಷ ತಡವಾಗಿ ಮತದಾನ ಆರಂಭವಾಗಿದೆ. ನಾಯಿಲ ಬೂತ್ ಸಂಖ್ಯೆ 115 ರಲ್ಲಿ ಸುಮಾರು 35 ಗಳ ಕಾಲ ತಡವಾಗಿ...

ಕರೋಪಾಡಿಯಲ್ಲಿ ಇನ್ನೂ ಶುರುವಾಗಿಲ್ಲ ಮತದಾನ: ಮತಯಂತ್ರದಲ್ಲಿ ತಾಂತ್ರಿಕ ದೋಷ…

ತಾಲೂಕಿನ ಕರೋಪಾಡಿ ಎಂಬಲ್ಲಿ ಮತದಾನದ ಯಂತ್ರದಲ್ಲಿ ದೋಷಕಂಡುಬಂದಿದ್ದು, ಮತದಾನಕ್ಕೆ ಅಡಚಣೆಯಾಗಿದೆ. ಬೂತ್ ಸಂಖ್ಯೆ 240 ಪದ್ಯಾಣ ಕರೋಪಡಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇನ್ನೂ ಕೂಡ ಮತದಾನ ಪ್ರಕ್ರಿಯೆ ಆರಂಭಗೊಂಡಿಲ್ಲ. ಮತದಾರರು...