Friday, April 5, 2024

ರೋಟರಿ ಪುತ್ತೂರು ಎಲೈಟ್ ನಿಂದ “ಕೇಳಿ ಮಕ್ಕಳೇ” ಜಾಗೃತಿ ವಿಡಿಯೋ ಬಿಡುಗಡೆ

ಪುತ್ತೂರು: ರೋಟರಿ ಪುತ್ತೂರು ಎಲೈಟ್ ನಿರ್ಮಿಸಿದ “ಕೇಳಿ ಮಕ್ಕಳೇ” ಶೀರ್ಷಿಕೆಯ ಮೊಬೈಲ್ ಕುರಿತ ಜಾಗೃತಿ ವಿಡಿಯೋವನ್ನು ರೋಟರಿ ಜಿಲ್ಲೆ 3181ರ ನಿಯೋಜಿತ ಗವರ್ನರ್ ರೊ.ಪ್ರಕಾಶ್ ಕಾರಂತ್ ಅವರು ಮಂಗಳವಾರ ಅಶ್ಮಿ ಕಂಫರ್ಟ್ ನಲ್ಲಿ ಬಿಡುಗಡೆಗೊಳಿಸಿದರು. ಡಿಸ್ಟ್ರಿಕ್ಟ್ ಚೇರ್ ಮೆನ್ ಪಬ್ಲಿಕ್ ಇಮೇಜ್ ರೊ.ಸಂತೋಷ್ ಶೆಟ್ಟಿ, ಡಿಸ್ಟ್ರಿಕ್ಟ್ ಸೆಕ್ರೆಟರಿ ಪ್ರಾಜೆಕ್ಟ್ ರೊ.ಆಸ್ಕರ್ ಆನಂದ್, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರೊ.ನಾರಾಯಣ ಹೆಗ್ಡೆ, ಉಪನ್ಯಾಸಕಿ ಭಾರತಿ ಎಸ್.ರೈ, ರೊ.ಈಶ್ವರ್ ಬೆಡೇಕರ್ , ರೊ.ಮೌನೇಶ ವಿಶ್ವಕರ್ಮ, ಅ್ಯನೆಟ್ ಸೌಪರ್ಣಿಕಾ ಬೆಡೇಕರ್ ಈ ಸಂದರ್ಭ ಉಪಸ್ಥಿತರಿದ್ದರು.


ಮಕ್ಕಳು ಮೊಬೈಲ್ ಬಳಕೆಯಲ್ಲಿ ಎಚ್ಚರವಹಿಸಬೇಕು, ಅನಿಯಮಿತ ಮೊಬೈಲ್ ವೀಕ್ಷಣೆಯಿಂದ ಆರೋಗ್ಯಕ್ಕೆ ಸಮಸ್ಯೆ ಎದುರಾಗುತ್ತದೆ, ಮಕ್ಕಳ ಕಲಿಕೆಗೆ ಮೊಬೈಲ್ ಅನಿವಾರ್ಯವಾಗಿದ್ದರೂ, ಹಿತಮಿತದ ಬಳಕೆಯಾಗಬೇಕು, ಪ್ರತಿ ಹಂತದಲ್ಲೂ ಮಕ್ಕಳು ಹಿರಿಯರ ಮಾತನ್ನು ಪಾಲಿಸಬೇಕು ಎನ್ನುವ ಜಾಗೃತ ಸಂದೇಶವನ್ನು ಈ ವಿಡಿಯೋ ಹೊಂದಿದೆ. ರೋಟರಿ ಪುತ್ತೂರು ಎಲೈಟ್ ನ ಸದಸ್ಯ, ಪತ್ರಕರ್ತ ಮೌನೇಶ ವಿಶ್ವಕರ್ಮ ರಚಿಸಿರುವ ಈ ಹಾಡನ್ನು, ಸೌಪರ್ಣಿಕಾ ಬೆಡೇಕರ್ ಹಾಡಿ, ಅಭಿನಯಿಸಿದ್ದಾರೆ.

More from the blog

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...