ಬಂಟ್ವಾಳ:  ಜಿ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್  ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ  ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ಸುಳ್ಳು ಸುದ್ದಿ ಪ್ರಕಟಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪುಂಜಾಲಕಟ್ಟೆ ಆರಕ್ಷಕ ಠಾಣೆಗೆ  ದೂರು ನೀಡಿದರು.


ಇತ್ತೀಚೆಗೆ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆವರಣ ಗೋಡೆ ಕುಸಿದಿದ್ದು, ಇದಕ್ಕೆ ಪದ್ಮ ಶೇಖರ ಜೈನ್ ಅವರ ಕಲ್ಲಿನ ಕೋರೆ ಕಾರಣವೆಂದು ಆರೋಪಿಸಿ ಅವಹೇಳನಕಾರಿಯಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ  ಪ್ರಕಟಿಸಿದ್ದಾರೆ. ಆದರೆ ಪದ್ಮಶೇಖರ ಜೈನ್ ಅವರು ದೇವಸ್ಥಾನದಿಂದ 2 ಕಿ.ಮೀ. ದೂರದಲ್ಲಿ ಕಲ್ಲಿನ ಕೋರೆ ನಡೆಸುತ್ತಿದ್ದು,ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಿದ್ದಾರೆ. ಆದರೂ ರಾಜಕೀಯ ದುರುದ್ದೇಶದಿಂದ  ಪದ್ಮಶೇಖರ ಜೈನ್ ಅವರ ಮೇಲೆ ಅವಹೇಳನಕಾರಿಯಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ  ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್,  ಬಾಲಕೃಷ್ಣ ಆಂಚನ್, ಮೋಹನ್ ಸಾಲ್ಯಾನ್, ಜಗದೀಶ್ ಕೊಯಿಲ,  ಕೆ.ವಿ. ರಾಜೇಂದ್ರ, ಜಯ ಬಂಗೇರ,  ದಯಾನಂದ ಶೆಟ್ಟಿ ಅಮೈ,  ಸದಾನಂದ ಶೆಟ್ಟಿ ಇಚ್ಚಿಲ, ನವೀನ್‌ಚಂದ್ರ ಶೆಟ್ಟಿ ವಾಮದಪದವು, ಸುದೀಂದ್ರ ಶೆಟ್ಟಿ ಎರ್ಮೆನಾಡು,  ಆದಂ ಕುಂಞಿ ಮಣಿನಾಲ್ಕೂರು, ವಿಕ್ಟರ್ ಡಿಸೋಜ, ಚಂದ್ರಶೇಖರ ಕರ್ಣ,  ಗೋಪಾಲ ನಯನಾಡು, ವಾಸು ಪೂಜಾರಿ ಪಾಂಡವರಕಲ್ಲು, ವಿಶ್ವನಾಥ್ ಸಾಲ್ಯಾನ್ ಬಿತ್ತ,  ಡೀಕಯ್ಯ ಬಂಗೇರ,  ವಿಶ್ವನಾಥ್ ಎಸ್. ಕುತ್ತಾಡಿ, ಮೋಹನ್ ಹೆಗ್ಡೆ, ಪ್ರಶಾಂತ್ ಕೋಟ್ಯಾನ್, ಗುರುಪ್ರಸಾದ್ ಇರ್ವತ್ತೂರು,  ಪದ್ಮನಾಭ ಶೆಟ್ಟಿ ಇರ್ವತ್ತೂರು, ಆನಂದ ಸಾಲ್ಯಾನ್ ತೆಂಕಕಜೆಕಾರು, ಸಂತೋಷ್ ಪೂಂಜಾ,  ಸತೀಶ್ ಪಡಂತ್ರಬೆಟ್ಟು,  ಪ್ರಮೋದ್ ಕುಮಾರ್ ಪಡಂತ್ರಬೆಟ್ಟು,  ಜಯಂತ ಪ್ರಭು,  ಪ್ರಸಾದ್ ಎನ್.ಸಿ.ರೋಡ್,  ಜೋನ್ ಸೇರಾ,  ಅರುಣ್ ಫೆರ್ನಾಂಡಿಸ್,  ಅಂಬ್ರೋಸ್ ಮೋರಾಸ್, ನೆಲ್ವಿಸ್ಟರ್ ಪಿಂಟೋ, ಯಶೋಧರ ಕಲ್ಲಂಜ,  ರಮಾನಂದ ಪಿಲಿಮೊಗರು,  ಪ್ರಶಾಂತ್ ಜೈನ್,  ಗಂಗಾಧರ್ ಶೆಟ್ಟಿ ಇರ್ವತ್ತೂರು,  ಬಾಲಕೃಷ್ಣ ರೈ ಇಚ್ಚಿಲ ಕಾವಳಕಟ್ಟೆ,  ಮಹಮ್ಮದ್ ಶರೀಫ್ ದೂಮಲ್ಕೆ , ಮಹಮ್ಮದ್ ಹನೀಫ್ ದೂಮಲ್ಕೆ , ಜಯಚಂದ್ರ ಬೊಳ್ಮಾರ್, ಅರುಣ್ ಭಟ್ ಕಲ್ಲಂಜ, ಚಂದ್ರಹಾಸ ಶೆಟ್ಟಿ   ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here