Wednesday, October 25, 2023

ನ.16 : ಪೊಳಲಿಯಲ್ಲಿ ಪೊಲೀಸ್ ಹೊರ ಠಾಣೆ ಉದ್ಘಾಟನೆ

Must read

ಬಂಟ್ವಾಳ : ಪೊಳಲಿಯಲ್ಲಿ ನಾಳೆ ನವೆಂಬರ್ 16 ಸೋಮವಾರ ಪೊಲೀಸ್ ಹೊರ ಠಾಣೆ ಉದ್ಘಾಟನೆ ನಡೆಯಲಿದೆ.

ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿಗೆ ಸನಿಹ ಬಸ್ ನಿಲ್ದಾಣದ ಬಳಿಯಲ್ಲಿ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲಿಸ್ ಔಟ್ ಪೋಸ್ಟ್‌ ಉದ್ಘಾಟನೆಯನ್ನು ಬೆಳಿಗ್ಗೆ 9 ಗಂಟೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕೀ ಹಸ್ತಾಂತರ ಮಾಡುವ ಮೂಲಕ ಮಾಡಲಿದ್ದಾರೆ.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯಕ್ಕೆ ಬರುವ ಭಕ್ತರಿಗೆ ಹೆಚ್ಚು ಭದ್ರತೆ ಯನ್ನು ಒದಗಿಸಲು ಸಹಾಯವಾಗುವ ನಿಟ್ಟಿನಲ್ಲಿ ಮತ್ತು ಅ ಭಾಗದಲ್ಲಿ ನಡೆಯುವ ಅಪರಾಧಗಳ ಬಗ್ಗೆ ಶೀಘ್ರವಾಗಿ ಮಾಹಿತಿ ಪಡೆಯಲು ಇದು ಸಹಾಯವಾಗುತ್ತದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪೊಳಲಿಗೆ ಹೋಗಿ ಬರಲು ತುಂಬಾ ಸಮಯ ತಗಲುತ್ತದೆ ಮತ್ತು ಪೋಲೀಸರು ಮಳೆಗಾಲದಲ್ಲಿ ಬಸ್ ನಿಲ್ದಾಣದಲ್ಲಿ ನಿಂತುಕೊಳ್ಳಲು ತೊಂದರೆಯಾಗುತ್ತಿತ್ತು ಈ ಎಲ್ಲಾ ಕಾರಣಗಳಿಗಾಗಿ ಸಾರ್ವಜನಿಕ ರ ಸಹಾಯದಿಂದ ಮತ್ತು ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ಅವರ ಮುತುವರ್ಜಿಯಿಂದ ಪೋಲೀಸ್ ಹೊರ ಠಾಣೆ ನಿರ್ಮಾಣ ಮಾಡಲಾಗಿದೆ.
ನಾಳಿನ ಕಾರ್ಯಕ್ರಮ ದಲ್ಲಿ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ಎಸ್.ಐ.ಗಳಾದ ಪ್ರಸನ್ನ, ಅವಿನಾಶ್, ಸಂಜೀವ, ರಾಜೇಶ್ ಕೆ.ವಿ. ಕಲೈಮಾರ್ ಮೊದಲಾದವರು ಭಾಗವಹಿಸಲಿದ್ದಾರೆ.

More articles

Latest article