Saturday, April 6, 2024

ಇರ್ವತ್ತೂರು ಗ್ರಾಂ.ಪಂ. ವ್ಯಾಪ್ತಿಯಲ್ಲಿ 1.74ಕೋ.ರೂ. ಮಿಕ್ಕಿ ಅಭಿವೃದ್ಧಿ ಕಾರ್ಯ: ರಾಜೇಶ್ ನಾಯ್ಕ್

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಇರ್ವತ್ತೂರು ಮತ್ತು ಮೂಡುಪಡುಕೋಡಿ ಗ್ರಾಮದಲ್ಲಿ 1 ಕೋಟಿ 74 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಹೇಳಿದರು.


ಅವರು ಗುರುವಾರ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪೂರ್ಣಗೊಂಡ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ಗ್ರಾಮೀಣ ಪ್ರದೇಶದಲ್ಲಿ ಇನ್ನಷ್ಟು ಕಾಮಗಾರಿಗಳು ಬಾಕಿ ಇದ್ದು, ಶೀಘ್ರದಲ್ಲಿ ಇನ್ನಷ್ಟು ಅನುದಾನ ಒದಗಿಸಿ ಎಲ್ಲ ಕಾಮಗಾರಿಗಳನ್ನು ಪೂರೈಸಲು ಪ್ರಯತ್ನಿಸಲಾಗುವುದು ಎಂದು ಅವರು  ಹೇಳಿದರು.


ಶಿಲಾನ್ಯಾಸ:  10 ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ನೆಕ್ಕಿತರಾವು-ಬರಮೇಲು  ಕಾಂಕ್ರಿಟ್ ರಸ್ತೆ ಕಾಮಗಾರಿ, 5 ಲಕ್ಷ ರೂ. ವೆಚ್ಚದ ಪೂರ್ಲಿ ರಸ್ತೆ, 10 ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ಪಂಜೋಡಿ-ಅರ್ಕೆದೊಟ್ಟು ರಸ್ತೆ,6 ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ಕಲಾಬಾಗಿಲು-ಸೇವಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.


ಉದ್ಘಾಟನೆ: 5 ಲ.ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಮೂಡುಪಡುಕೋಡಿ ಗ್ರಾಮದ ಕುಕ್ಕೆರೋಡಿ-ಶ್ರೀ ಅಗ್ನಿದುರ್ಗೆ ದೇವಸ್ಥಾನ ಕಾಂಕ್ರೀಟ್ ರಸ್ತೆ, 20 ಲ.ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಮುಂಡಬಲು-ಕಾಡಬೆಟ್ಟು  ಕಾಂಕ್ರೀಟ್ ರಸ್ತೆ, 4 ಲ.ರೂ ವೆಚ್ಚದಲ್ಲಿ  ಗ್ರಾಮ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡ ಕುತ್ತಿಲ-ಮಲ್ಲೇರಿ ಕಾಂಕ್ರೀಟ್ ರಸ್ತೆ, 15 ಲಕ್ಷ ರೂ. ವೆಚ್ಚದ ಇರ್ವತ್ತೂರು ಗ್ರಾಮದ ಪಂಜೋಡಿ- ಮಣ್ಣೂರು ದೇವಸ್ಥಾನ ಕಾಂಕ್ರೀಟ್ ರಸ್ತೆ, 25 ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ಗುಂಪಕಲ್ಲು-ಸೇವಾ ಕಾಂಕ್ರೀಟ್ ರಸ್ತೆ,15 ಲಕ್ಷ ರೂ. ವೆಚ್ಚದ ಮೂಡುಪಡುಕೋಡಿ ಗ್ರಾಮದ ಸೇವಾ-ಕಜೆಕೋಡಿ ಕಾಂಕ್ರೀಟ್ ರಸ್ತೆ, 15 ಲಕ್ಷ ರೂ. ವೆಚ್ಚದ ಇರ್ವತ್ತೂರು ಗ್ರಾಮದ ಮೇಲ್ಪತ್ತರ-ಪೆತ್ತರ ಕಾಂಕ್ರೀಟ್ ರಸ್ತೆ, 10 ಲಕ್ಷ ರೂ. ವೆಚ್ಚದ ಪೊಟ್ಟುಕೆರೆ-ಪಲ್ಕೆತ್ತು ರಸ್ತೆ ಮೊದಲಾದ ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ,ತಾ.ಪಂ.ಸದಸ್ಯ ರಮೇಶ್ ಪೂಜಾರಿ ಕುಡ್ಮೇರ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಸುಜಾತಾ ಪ್ರಕಾಶ್, ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಶ್ರೀ ಅಗ್ನಿದುರ್ಗೆ ದೇವಸ್ಥಾನ ಧರ್ಮದರ್ಶಿ ರಾಘವ ಸುವರ್ಣ, ಪ್ರಮುಖರಾದ ಬೂಬ ಸಪಲ್ಯ, ಸುಂದರ ನಾಯ್ಕ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥ ರಾಯಿ, ರವಿಶಂಕರ ಹೊಳ್ಳ, ದಯಾನಂದ ಎರ್ಮೆನಾಡು, ದಯಾನಂದ ಕುಲಾಲ್, ಮಿಥುನ್ ಪ್ರಭು ಮಲ್ಯಾರ್,ಲೋಕೇಶ್ ಎರ್ಮೆನಾಡು, ಹೇಮಚಂದ್ರ ಶೆಟ್ಟಿ, ಆನಂದ ಪೂಜಾರಿ ಕುಡ್ಮೇರ್, ಶ್ರೀನಿವಾಸ ಪೂಜಾರಿ, ಹರೀಶ್ ಪೂಜಾರಿ ಎರ್ಮೆನಾಡು, ಉದಯ ಕಜೆಕೋಡಿ,ಭರತ್ ರಾಜ್ ಜೈನ್, ಅಬೂಬಕ್ಕರ್ ಅಂಕರಜಾಲ್, ಶಂಕರ ಶೆಟ್ಟಿ ಪಲ್ಕೆತ್ತು, ಜಯ ಶೆಟ್ಟಿ ನೆಕ್ಕಿತರವು, ಪ್ರಕಾಶ್ ಮಲ್ಲೇರಿ, ಹರಿಪ್ರಸಾದ್ ಅರ್ಕೆದೊಟ್ಟು, ಉಗ್ಗಪ್ಪ ಶೆಟ್ಟಿ ಸೇವಾ, ಯಕ್ಷಿತ್ ಗೌಡ, ಗ್ರಾ.ಪಂ.ಕಾರ್ಯದರ್ಶಿ ನಾರಾಯಣ ನಾಯ್ಕ್ ಹಾಗೂ ಮತ್ತಿತರರಿದ್ದರು.
ಪಂ.ಅ.ಅಧಿಕಾರಿ ಅವಿನಾಶ್ ಬಿ.ಆರ್. ಸ್ವಾಗತಿಸಿ, ನಿರೂಪಿಸಿದರು.

More from the blog

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...