Thursday, April 18, 2024

ಹೆರಿಗೆಯ ವೇಳೆ ತಾಯಿ ಮಗು ಸಾವು!

ಬಂಟ್ವಾಳ: ಹೆರಿಗೆಯ ವೇಳೆ ರಕ್ತಸ್ರಾವದಿಂದ ಬಂಟ್ವಾಳದ ಗುತ್ತಿಗೆದಾರರೋರ್ವರ ಪತ್ನಿ ಹಾಗೂ ಮಗು ಮೃತಪಟ್ಟ ಘಟನೆ ಮಂಗಳೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಾಲೇಜು ರೋಡ್ ನಿವಾಸಿ ಸಿವಿಲ್ ಗುತ್ತಿಗೆದಾರ ಭವಾನಿ ಶಂಕರ್ ಅವರ ಪತ್ನಿ ಕಾಜಲ್ ಶೆಟ್ಟಿ (25) ಮೃತಪಟ್ಟ ಗರ್ಭಿಣಿ.
ಕಾಜಲ್ ಶೆಟ್ಟಿ ಅವರನ್ನು ಹೆರಿಗೆಗೆಂದು ತುಂಬೆ ಫಾದರ್ ಮುಲ್ಲರ್ ಖಾಸಗಿ ಆಸ್ಪತೆಗೆ ಶನಿವಾರ ಮದ್ಯರಾತ್ರಿ ದಾಖಲು ಮಾಡಲಾಗಿತ್ತು. ಇಂದು ಬೆಳಿಗ್ಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಅವೇಳೆ ಮಗು ಮೃತಪಟ್ಟಿದೆ. ಸಿಸೇರಿಯನ್ ಬಳಿಕ ಅಧಿಕ ರಕ್ತಸ್ರಾವ ಉಂಟಾಗಿದ್ದು ಬೆಳಿಗ್ಗೆ 7.30 ಗಂಟೆಗೆ ಮಂಗಳೂರು ಕಂಕನಾಡಿ ಪಾಧರ್ ಮುಲ್ಲರ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು.
ರಾತ್ರಿ ವೇಳೆ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟಿದ್ದು ವೈದ್ಯ ರ ನಿರ್ಲಕ್ಷ್ಯ ವೇ ಸಾವಿಗೆ ಕಾರಣ ಎಂದು ಪತಿ ಭವಾನಿಶಂಕರ್ ಆರೋಪ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ
ಕಾಜಲ್ ಶೆಟ್ಟಿ ಅವರನ್ನು ಶನಿವಾರ ರಾತ್ರಿ 12 ಗಂಟೆಯ ವೇಳೆಗೆ ತುಂಬೆ ಫಾದರ್ ಮುಲ್ಲರ್‍ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ದಾಖಲಾದ ವೇಳೆ ವೈದ್ಯ ರು ಪರೀಕ್ಷಿಸಿ ನಾರ್ಮಲ್ ಡೆಲಿವರಿ ಅಗುತ್ತದೆ ಎಂದು ಹೇಳಿದ್ದರು.
ಆದರೆ ಬೆಳಿಗ್ಗೆ ವೇಳೆ ಪರೀಕ್ಷಿಸಿದ ವೈದ್ಯರು ಆಪರೇಶನ್ ಮಾಡಬೇಕೆಂದು ತಿಳಿಸಿ, ಅಪರೇಷನ್ ಮಾಡಿದ್ದಾರೆ. ಅಪರೇಷನ್ ಸಂಧರ್ಭದಲ್ಲಿ ಮಗು ಮೃತಪಟ್ಟಿದ್ದು ಕಾಜಲ್ ಶೆಟ್ಟಿಗೆ ಅಧಿಕ ರಕ್ತಶ್ರಾವ ಉಂಟಾಗಿತ್ತು. ಅ ಸಂದರ್ಭದಲ್ಲಿ ವೈದ್ಯರು ಕೈ ಚೆಲ್ಲಿದ್ದು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಗೆ ಕೊಂಡುಹೋಗುವಂತೆ ತಿಳಿಸಿದರು.
ಕಂಕಾನಡಿ ಆಸ್ಪತ್ರೆ ಗೆ ದಾಖಲಾದ ಬಳಿಕ ಯಾವುದೇ ತೊಂದರೆ ಇಲ್ಲ ಎಂದು ಹೇಳಿದವರು ರಾತ್ರಿ ವೇಳೆ ಡೆತ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಕಾಜಲ್ ಶೆಟ್ಟಿ ಹಾಗೂ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪತಿ ಭವಾನಿ ಶಂಕರ್ ಶೆಟ್ಟಿ ಆರೋಪ ಮಾಡಿದ್ದಾರೆ.

More from the blog

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...

ಹಿಮ್ಮುಖವಾಗಿ ಚಲಿಸಿದ ಪಿಕಪ್‌… ವ್ಯಕ್ತಿ ಸಾವು

ಬೆಳ್ತಂಗಡಿ: ಶಿಬಾಜೆ ಗ್ರಾಮದ ತಂಬ್ಲಾಜೆಯಲ್ಲಿ ಪಿಕಪ್‌ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ರುಕ್ಮ ಮುಗೇರ ಹಾಗೂ ನಾಗೇಶ್‌ ಅವರು ಪಿಕಪ್‌ ವಾಹನದಲ್ಲಿ...

ಜೀಪ್ ಬೈಕ್ ಗೆ ಡಿಕ್ಕಿ… ಬೈಕ್ ಸವಾರ ಸಾವು : ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಜೀಪೊಂದು ಬೈಕ್ ಗೆ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ...

ರಾಜ್ಯದಲ್ಲಿ ಮತ್ತೆ ಏರಿದ ತಾಪಮಾನ

ಬೆಂಗಳೂರು: ಕಳೆದೊಂದು ವಾರದಿಂದ ತಗ್ಗಿದ್ದ ತಾಪಮಾನ ಮತ್ತೆ ಏರಿಕೆಯಾಗಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...