ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟು ಶ್ರೀ ಕಲ್ಲುರ್ಟಿ, ಪಂಜುರ್ಲಿ ಮತ್ತು ಗುಳಿಗ ದೈವಸ್ಥಾನದಲ್ಲಿ ಕೋವಿಡ್ -19 ಸೋಂಕನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ವರ್ಷದ ಕಾಲಾವಧಿ ನೇಮೋತ್ಸವ ವನ್ನು ನಡೆಸಲು ಸಾಧ್ಯವಾಗದ ಕಾರಣ ನೇಮೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ನ.22ರ ಆದಿತ್ಯವಾರ ಮದ್ಯಾಹ್ನ 12:00 ಗಂಟೆಯಿಂದ ಅಗೇಲು ಸೇವೆ ನಡೆಸುವುದಾಗಿ ಕ್ಷೇತ್ರದ ಆಡಳಿತ ಮಂಡಳಿ ತೀರ್ಮಾನಿಸಿದ್ದು, ಆ ಪ್ರಯುಕ್ತ ಭಕ್ತಾದಿಗಳಿಂದ ಅಗೇಲು ಸೇವೆಯನ್ನು ಸ್ವೀಕರಿಸಲಾಗುವುದು.

ಅಗೇಲು ಸೇವೆ ನೀಡುವವರು ಎರಡು ದಿನ ಮುಂಚಿತವಾಗಿ ತಿಳಿಸಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ. ನ.22 ರಂದು ಆದಿತ್ಯವಾರ ಮದ್ಯಾಹ್ನ 3 ಗಂಟೆಯಿಂದ ಅಗೇಲು ಸೇವೆಯ ಪ್ರಸಾದ ವಿತರಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಭಕ್ತಾದಿಗಳಿಗೆ ವಿಶೇಷ ಸೂಚನೆ :-
1.ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು.

2.ದೈವಸ್ಥಾನದ ವಠಾರದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಬೇಕು.

ಅಗೇಲು ಸೇವೆಯ ಬಗ್ಗೆ ಮಾಹಿತಿಗಾಗಿ 9845130431 , 9632449320 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಆಡಳಿತ ಮಂಡಳಿ ತಿಳಿಸಿದೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here